ನವದೆಹಲಿ: ಜನಾಂಗೀಯ ಹಿಂಸಾಚಾರಕ್ಕೆ ನಲುಗಿದ ಮಣಿಪುರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ಫೆಬ್ರವರಿ 9ರಂದು ರಾಜೀನಾಮೆ ನೀಡಿದ್ದರು. ಸಿಎಂ ರಾಜೀನಾಮೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ.
ಮಣಿಪುರ ರಾಜ್ಯದ ರಾಜ್ಯಪಾಲರಿಂದ ವರದಿಯನ್ನು ಸ್ವೀಕರಿಸಿದ್ದು, ಬಂದ ವರದಿ ಮತ್ತು ಇತರ ಮಾಹಿತಿಯನ್ನು ಪರಿಗಣಿಸಿದ ನಂತರ, ಆ ರಾಜ್ಯದ ಸರ್ಕಾರವನ್ನು ಭಾರತದ ಸಂವಿಧಾನದ ನಿಬಂಧನೆಗಳ ಪ್ರಕಾರ ನಡೆಸಲಾಗದ ಪರಿಸ್ಥಿತಿ ಉದ್ಭವಿಸಿದೆ.
ಆದ್ದರಿಂದ, ಸಂವಿಧಾನದ 356 ನೇ ವಿಧಿಯಿಂದ ನೀಡಲಾದ ಅಧಿಕಾರಗಳನ್ನು ಮತ್ತು ಆ ಪರವಾಗಿ ಅನುವು ಮಾಡಿಕೊಡುವ ಇತರ ಎಲ್ಲಾ ಅಧಿಕಾರಗಳನ್ನು ಚಲಾಯಿಸಲು ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ.