Ad imageAd image

ಅಧ್ಯಕ್ಷ,ಉಪಾಧ್ಯಕ್ಷ ಅವಿರೋಧ ಆಯ್ಕೆ

Bharath Vaibhav
ಅಧ್ಯಕ್ಷ,ಉಪಾಧ್ಯಕ್ಷ ಅವಿರೋಧ ಆಯ್ಕೆ
WhatsApp Group Join Now
Telegram Group Join Now

ಚಿಟಗುಪ್ಪ: ತಾಲೂಕಿನ ಮಂಗಲಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಜರುಗಿತ್ತು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ವೈಜಿನಾಥ ಶರಣಪ್ಪ ವೀರಡ್ಡಿ,ಉಪಾಧ್ಯಕ್ಷರಾಗಿ ವಿಠ್ಠಲ ಲಾಲಪ್ಪ ಅರ್ಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗುರುನಾಥ ತಿಳಿಸಿದರು.

ಬಳಿಕ ಪಿಕೆಪಿಎಸ್ ನೂತನ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಸರ್ವ ನಿರ್ದೇಶಕರನ್ನು ಪಿಕೆಪಿಎಸ್ ಹಾಗೂ ಗ್ರಾಮದ ಮುಖಂಡರಿಂದ ಸನ್ಮಾನಿಸಿ ಅಭಿನಂದಿಸಲಾಯಿತಿ.

ಬಳಿಕ ನೂತನ ಅಧ್ಯಕ್ಷ ವೈಜೀನಾಥ ವೀರಡ್ಡಿ ಮಾತನಾಡಿ,ಸ್ವಸಹಾಯ ಸಂಘಗಳ ಏಳಿಗೆಗಾಗಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.ಜಿಲ್ಲೆ ಅಲ್ಲದೆ ಇಡಿ ರಾಜ್ಯದಲ್ಲಿಯೇ ಮಾದರಿ ಪಿಕೆಪಿಎಸ್ ಎಂಬ ಹೆಸರು ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ.ನೆಮ್ಮೆಲರ ಸಹಕಾರ ಇರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ವೆಂಕಟರೆಡ್ಡಿ ವೀರಾರೆಡ್ಡಿ,ಕಂಟೇಪ್ಪ ರಾಮಶೆಟ್ಟಿ,ಮಾಣಿಕರೆಡ್ಡಿ ಬಕ್ಕಾರೆಡ್ಡಿ,ಭೀಮಣ್ಣಾ ಶಿವಪ್ಪಾ,ಇಬ್ರಾಹಿಮ ಪಟೇಲ್ ಫರೀದ ಪಟೇಲ್,ಶಫಿಯಾಬೇಗಂ ಅಬ್ದುಲ ಖಾದರ್,ಬಕ್ಕಮ್ಮಾ ಕಲ್ಲಪ್ಪ,ದೇವಿಂದ್ರ ರಾಮಚಂದ್ರಪ್ಪ,ರಮೇಶ ಚಂದ್ರಪ್ಪ,ಕಮಲರೆಡ್ಡಿ ತುಕ್ಕಾರೆಡ್ಡಿ,ಪಿಕೆಪಿಎಸ್ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ,ಸಿಬ್ಬಂದಿಗಳಾದ,ಸಂತೋಷ ರೆಡ್ಡಿ, ಮಹಾನಂದಾ,ಮಹೇಶ ಗುಂಡಪ್ಪ,ವಿಶ್ವನಾಥ, ಪಿಕೆಪಿಎಸ್ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಅಂಬಾಡಿ,ಪ್ರಮುಖರಾದ ಪ್ರಶಾಂತ, ಮುಖಬುಲ್,ಮಲ್ಲಪ್ಪ ಗೌರಾ,ತಿಪ್ಪಣ್ಣ,ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸ್ವಸಹಾಯ ಸಂಘಗಳ ಏಳಿಗೆಗಾಗಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.ಜಿಲ್ಲೆ ಅಲ್ಲದೆ ಇಡಿ ರಾಜ್ಯದಲ್ಲಿಯೇ ಮಾದರಿ ಪಿಕೆಪಿಎಸ್ ಎಂಬ ಹೆಸರು ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತದೆ.

ವರದಿ:ಸಜೀಶ ಲಂಬುನೋರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!