ಮೊಳಕಾಲ್ಮುರು :- ವಾಲ್ಮೀಕಿ ಮಂಡಳಿಯ ಹಣ ಯಾರು ಕೊಳ್ಳೆ ಹೊಡೆದಿದ್ದಾರೆ ಇದಕ್ಕೆ ಉತ್ತರ ಕೊಡಿ ಸ್ವಾಮಿ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.ಪಟ್ಟಣದಲ್ಲಿ ಗುರುವಾರ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ವಾಲ್ಮೀಕಿ ನಿಗಮದ 187 ಕೋಟಿ ಹಣ ಆಂಧ್ರಪ್ರದೇಶದ ರಾಜಕೀಯಕ್ಕೆ ಬಳಸಿಕೊಂಡಿದ್ದೀರಾ ಇದಕ್ಕೆ ವಾಲ್ಮೀಕಿ ಅಣವೆ ಬೇಕಿತ್ತಾ, ನಾಯಕ ಸಮಾಜದ ದುಡ್ಡು ಬೇಕಿತ್ತಾ ಎಂದು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ನಿಗಮದ ಹಗರಣದ ಕುರಿತು ಯಾವೊಬ್ಬ ಶಾಸಕರು ಕೂಡ ಮಾತನಾಡುತ್ತಿಲ್ಲ ನಾಚಿಕೆಯಾಗಬೇಕು ನಿಮಗೆ ಅಧಿಕಾರ ಶಾಶ್ವತವಲ್ಲ ನಮ್ಮ ಜನಗಳಿಗೆ ಅನ್ಯಾಯವಾಗಿದೆ ಧ್ವನಿ ಎತ್ತಬೇಕು ಎಂದರೋ.ಅದೇ ರೀತಿ ಎಸಿಪಿಯಲ್ಲಿ 13,000 ಕೋಟಿ ಕೂಡ ಕೊಳ್ಳೆ ಹೊಡೆದಿದ್ದಾರೆ ಈ ದುಡ್ಡಲ್ಲ ಎಲ್ಲಿ ಹೋದವು ಸ್ವಾಮಿ ಈ ದುಡ್ಡೆಲ್ಲ ಗ್ಯಾರೆಂಟಿಗಳಿಗೆ ಹೋದವು ಒಟ್ಟು 25,000 ಕೋಟಿಯನ್ನು ಕಾಂಗ್ರೆಸ್ ಅವರು ಕೊಳ್ಳೆ ಹೊಡೆದಿದ್ದಾರೆ ಎಂದರು.
ಬಿಟ್ಟಿಬಾಗಿಗಳಿಗೆ ಹಣ ಎಲ್ಲಿಂದ ಬರುತ್ತೆ ಸ್ವಾಮಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದೀರಾ ಮುಂದಿನ ದಿನಗಳಲ್ಲಿ ಜನಗಳು ತಕ್ಕ ಪಾಠ ಕಲಿಸುತ್ತಾರೆ ಎಂದರು.ನಿಮ್ಮ ಪಕ್ಷದ ಶಾಸಕರೇ ಬಹಿರಂಗವಾಗಿ ಹೇಳುತ್ತಿದ್ದಾರೆ ಮೂಡ ಹಗರಣದಲ್ಲಿ ನೇರವಾಗಿ ಸಿದ್ದರಾಮಯ್ಯನವರೇ ಭಾಗಿಯಾಗಿದ್ದಾರೆ.
ಇಡೀ ರಾಜ್ಯದಲ್ಲಿ ನಿಮ್ಮ ಆಡಳಿತ ನೆಲ ಕಚ್ಚಿದೆ ಇಡೀ ರಾಜ್ಯವೇ ದಿವಾಳಿಯಾಗಿದೆ ಯಾವುದೇ ಕಾಮಗಾರಿಗಳಿಗೆ ಹಣವಿಲ್ಲ ಎಲ್ಲಾ ಹಣವು ಬಿತ್ತಿ ಭಾಗಗಳಿಗೆ ಹೋಗುತ್ತದೆ ಅಭಿವೃದ್ಧಿ ಎಲ್ಲಿ ಬರುತ್ತದೆ ಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿ ಹಾಯ್ದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಡಾ ಪಿಎಂ ಮಂಜುನಾಥ್ , ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾದ ಕೆಬಿ ಮಹೇಶ್ ಮಂಡಲ ಪ್ರಧಾನ ಕಾರ್ಯದರ್ಶಿ ಎಂ ಪಿ ಪ್ರಭಾಕರ್ ಪಟ್ಟಣ ಪಂಚಾಯತಿ ಮಾಜು ಉಪಾಧ್ಯಕ್ಷರಾದ ಬಿ ಮಂಜಣ್ಣ, ನಗರ ಘಟಕದ ಅಧ್ಯಕ್ಷರಾದ ಕಿರಣ್ ಗಾಯಕ್ವಾಡ್ ಪಟ್ಟಣ ಪಂಚಾಯತಿ ಸದಸ್ಯರಾದ ಸಿದ್ದಣ್ಣ ಡಿಶ್ ರಾಜು ಭೀಮಣ್ಣ ಮುಖಂಡರಾದ ಹೇಮಂತ್ ಕುಮಾರ್ ನಾಗರಾಜ್ ಶರಣಪ್ಪ ಮಲ್ಲಿಕಾರ್ಜುನ್ ಮತ್ತು ಪಕ್ಷದ ಪದಾಧಿಕಾರಿಗಳು ಇನ್ನು ಹಲವು ಉಪಸ್ಥಿತರಿದ್ದರು
ವರದಿ:- ಪಿಎಂ ಗಂಗಾಧರ