ಪತ್ರಿಕಾ ವಿತರಕರ ದಿನ ಆಚರಣೆ ಕಾರ್ಯಕ್ರಮ.

Bharath Vaibhav
ಪತ್ರಿಕಾ ವಿತರಕರ ದಿನ ಆಚರಣೆ ಕಾರ್ಯಕ್ರಮ.
WhatsApp Group Join Now
Telegram Group Join Now

ಬಾದಾಮಿ:- ತಾಲೂಕ ಪಟ್ಟಣದ ಪತ್ರಿಕಾ ಭವನದಲ್ಲಿ ದಿನ ನಿತ್ಯ ಪತ್ರಿಕೆ ಹಂಚುವ ವಿತರಕರಿಗೆ ಪತ್ರಿಕೆ ಎಜೇಂಟರಿಂದ ಜಾಕೀಟ್ ವಿತರಣೆ ಕಾರ್ಯಕ್ರಮ. ಕಾರ್ಯಕ್ರಮ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನಿಡಿ. ನಂತರ ಕಾರ್ಯಕ್ರಮಕ್ಕೆ ಭಾಗಿಯಾದ ಗಣ್ಯಮಾನ್ಯರು ಪತ್ರಕರ್ತರ ಹಾಗೂ ಎಜೇಂಟರ ವಿತರಕರ ಬಗ್ಗೆ ಸವಿಸ್ತಾರವಾಗಿ ಹೇಳಿದರು. ವಿತರಕರು ವರದಿಗಾರರ ಎರಡು ಕಣ್ಣು ಇದ್ದಂತೆ. ವಿತರಕರು ಸರಕಾರಿ ಉಪಯೋಗ ಪಡೆದುಕೊಳ್ಳಿ ಪಟ್ಟಣದ ಪುರಸಭೆ ಯಲ್ಲಿ ಸಾಲ ಸೌಲಭ್ಯ ಸಿಗುತ್ತವೆ. ಪತ್ರಿಕೆ ಪ್ರತಿ ಮನೆಗೆ ಸರಿಯಾದ ಸಮಯಕ್ಕೆ ತಲುಪಿಸಿ,

ನಾವು ಸುದ್ದಿ ತರುತ್ತೇವೆ ಆದರೆ ಆ ಸುದ್ದಿ ಮನೆ ಮನೆಗೆ ತಲುಪಿಸುವವರು ತಾವು ಇದರಲ್ಲಿ ತಮ್ಮ ಪಾತ್ರ ಬಹಳ ಮುಖ್ಯ ಅದಕ್ಕಾಗಿ. ನಂತರ ಪತ್ರಿಕೆ ವಿತರಕರಿಗೆ ಮಾಲೆ ಹಾಕಿ ಜಾಕೀಟ್ ವಿತರಣೆ ಮಾಡಿದರು. ಸಿಹಿ ಹಂಚಿ ಕಾರ್ಯಕ್ರಮ ಯಶಸ್ವಿ ಗೊಳಿಸಿ ಅಲ್ಪೊಪಹಾರ ಸೇವಿಸಿ ಕಾರ್ಯಕ್ರಮ ಮುಕ್ತಾಯ ಗೊಳಿಸಿದರು. ಈ ಸಂದರ್ಭದಲ್ಲಿ ಬಾದಾಮಿ ತಾಲೂಕ ವಿಜಯ್ ಕರ್ನಾಟಕ ಪತ್ರಿಕೆ ವರದಿಗಾರರು ಲಿಂಗರಾಜ್ ಚಿನಿವಾಲರ, ವಿಶ್ವವಾಣಿ ಪತ್ರಿಕೆ ವರದಿಗಾರರು ಬಸವರಾಜ್ ಉಳ್ಳಾಗಡ್ಡಿ, ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರರು ಅಡವೇಂದ್ರ ಇನಾಮದಾರ್, ಕನ್ನಡ ಪ್ರಭ ಪತ್ರಿಕೆ ವರದಿಗಾರರು ಶಂಕರ್ ಕುದರಿಮನಿ, ಉದಯವಾಣಿ ಪತ್ರಿಕೆ ವರದಿಗಾರರು ಮಾಂತೇಶ್ ಹೊಸಕೇರಿ ಹಾಗೂ ಎಜೇಂಟರ್ ವಿರೇಶ್ ಸೊಬರದ, ವಾಜಿರಾಜ್ ಗುಡಿ, ಪತ್ರಿಕೆ ವಿತರಕರು ಉಪಸ್ಥಿತರಿದ್ದರು.

ವರದಿ:-ಎಸ್ ಎಸ್. ಕವಲಾಪುರಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!