ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿದೆ. ಹಿರಿಯ ಸಾಹಿತಿ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಮೂಲಕ ಸಮಕಾಲೀನ ಗ್ರಾಮೀಣ ಬದುಕಿನ ನೋವು-ನಲಿವುಗಳಿಗೆ ದೊಡ್ಡ ಗೌರವ ಸಂದಂತಾಗಿದೆ.
ಏನಿದೆ ಈ ಕೃತಿಯಲ್ಲಿ?
ದಡ ಸೇರಿಸು ತಂದೆ ನುಗಡೋಣಿ ಅವರ 6ನೇ ಕಥಾ ಸಂಕಲನ. ಇದರಲ್ಲಿರುವ ಎಂಟು ಕಥೆಗಳು ಕೇವಲ ಕಲ್ಪನೆಗಳಲ್ಲ, ಬದಲಿಗೆ ಇಂದಿನ ಗ್ರಾಮೀಣ ಭಾರತದ ಜ್ವಲಂತ ಸಮಸ್ಯೆಗಳ ಕನ್ನಡಿ:
ಮರ್ಯಾದಾ ಹತ್ಯೆ: ಹಳ್ಳಿಗಳಲ್ಲಿ ನಡೆಯುವ ಕ್ರೌರ್ಯದ ನೈಜ ಚಿತ್ರಣ.ಗುಂಪು ಹಿಂಸಾಚಾರ (Mob Violence)ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವ ಬಗೆ.ಬದಲಾಗುತ್ತಿರುವ ಹಳ್ಳಿಗಳ ಸಂಕೀರ್ಣ ಸಂಬಂಧಗಳು ಮತ್ತು ಜನರ ಬದುಕಿನ ಸಂಕಟಗಳನ್ನು ಈ ಕೃತಿ ಅತ್ಯಂತ ಪ್ರಬಲವಾಗಿ ಬಿಂಬಿಸುತ್ತದೆ.
ಪ್ರಶಸ್ತಿಯ ವಿವರಗಳು:
ಬಹುಮಾನ: ₹1,00,000 ನಗದು, ತಾಮ್ರ ಫಲಕ, ಶಾಲು ಮತ್ತು ಸ್ಮರಣಿಕೆ.
ಪ್ರದಾನ: ಇದೇ ಮಾರ್ಚ್ 31ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು.
ಆಯ್ಕೆ ಸಮಿತಿ: ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಜಯಲಲಿತ ಮತ್ತು ಸಹನಾ ಕಾಂತಬೈಲು ಅವರಿದ್ದ ತಜ್ಞರ ತಂಡ ಈ ಕೃತಿಯನ್ನು ಆಯ್ಕೆ ಮಾಡಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನುಗಡೋಣಿಯವರಾದ ಇವರು, ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಳ್ಳಿಯ ಸೊಗಡನ್ನು ಅಕ್ಷರರೂಪಕ್ಕೆ ಇಳಿಸುವಲ್ಲಿ ಇವರು ಸಿದ್ಧಹಸ್ತರು
ಒಟ್ಟು 24 ಭಾಷೆಗಳಲ್ಲಿ ನೀಡಲಾಗುವ ಈ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಸಿಕ್ಕ ಈ ಗೌರವ ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯಹಿರಿಯ ಸಾಹಿತಿ ಅಮರೇಶ ನುಗಡೋಣಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ..
ಪ್ರಶಸ್ತಿ ವಿಜೇತ ಇತರೆ ಲೇಖಕರು ಮತ್ತು ಅವರ ಕೃತಿ
ಬೆಂಗಾಳಿಯ ಪ್ರಸನ್ ಬಂಡೋಪಾದ್ಯಾಯ ಅವರ ಶ್ರೇಷ್ಠ ಕವಿತಾ,
ಗುಜರಾತಿಯಲ್ಲಿ ಯೋಗೇಶ್ ವೈದ್ಯ ಅವರ ಭಟ್ಟಖದಕಿ,
ಕನ್ನಡದಲ್ಲಿ ಅಮರೇಶ್ ನುಗಡೋನಿ ಅವರ ದಡ ಸೇರಿಸು ತಂದೆ,
ಮಲಯಾಣಂನಲ್ಲಿ ಎನ್ ಪ್ರಭಾಕರನ್ ಅವರ “ಮಾಯಮನುಶ್ಯರ್,
ಮರಾಠಿಯಲ್ಲಿ ರಾಜು ಭವಿಸ್ಕಾರ್ ಅವರ ಕಲ್ಯಾನಿಲ್ಯ ರೇಷ,
ಪಂಜಾಬಿಯಲ್ಲಿ ಜಿಂದ್ರೆ ಅವರ ಸೇಫ್ಟಿ ಕಿಟ್,
ರಾಜಸ್ಥಾನಿಯಲ್ಲಿ ಜಿತೇಂದ್ರ ಕುಮಾರ್ ಸೋನಿ ಅವರ ಭರ್ಖಾಮ,
ತಮಿಳಿನಲ್ಲಿ ಸಾ ತಮಿಳ್ಸೆಲ್ವಂ ಅವರ ತಮಿಳ್ ಸಿರುಕಥಿಯಿನಿ ಥಡಂಗಳ್,
ಉರ್ದುವಿನಲ್ಲಿ ಪ್ರೀತ್ಪಾಲ್ ಸಿಂಗ್ ಬೆತಬ್ ಅವರ ಸಫರ್ ಜಾರಿ ಹೇ,
ತೆಲುಗುದಲ್ಲಿ ನಂದಿನಿ ಸಿಂದ್ ರೆಡ್ಡಿ ಅವರ ಅನಿಮೇಶ,
ಸಿಂಧಿಯಲ್ಲಿ ಭಗವಾನ್ ಅತ್ಲಾನಿ ಅವರ ವಾಗೂ,
ಸಂತಾಲಿಯಲ್ಲಿ ಸುಮಿತ್ರಾ ಸೊರೆನ್ ಅವರ ಮಿಡ್ ಬಿರ್ನಾ ಚೆನ್ನೆ ಸಾವ್ ಇನಾಗ್ ಸಗಾಯ್,
ಸಂಸ್ಕೃತದಲ್ಲಿ ಮಹಾಮಹೋಪಾಧ್ಯಾಯ ಸಾಹು ಭದ್ರೇಶ್‌ದಾಸ್ ಅವರ ಪ್ರಸ್ಥಾನಚತುಸ್ತಯೇ ಬ್ರಹ್ಮಘೋಷಃ,
ಒಡಿಯಾದಲ್ಲಿ ಗಿರಿಜಾಕುಮಾರ್ ಬಲಿಯಾರ್ ಸಿಂಗ್ ಅವರ ಪದಪುರಾಣ,
ನೇಪಾಳಿಯಲ್ಲಿ ಪ್ರಕಾಶ್ ಭಟ್ಟರು ಅವರ ನೇಪಾಳಿ ಪರಂಪರೆಕ್ ಸಂಸ್ಕೃತಿ ರಾ ಸಭ್ಯತಾ ಕೊ ಡುಕುಟಿ
ಮಣಿಪುರದಲ್ಲಿ ಮಣಿಪುರದ ಹಾಬಾಮ್ ನಳಿನಿ ಅವರ ಕಂಗ್ಲಾಂದ್ರಿಬಾ ಇಪುಟ್




