ಐನಾಪುರ:ಪ್ರತಿಯೊಬ್ಬರು ಸ್ವಾವಲಂಬನೆಯಿದ ಬದುಕಬೇಕಾದರೆ ಶಿಕ್ಷಣ ಹಾಗೂ ಸಂಸ್ಕಾರ ಅತೀ ಮುಖ್ಯವಾಗಿದೆ. ಮಕ್ಕಳು ಯಶಸ್ಸಿನ ಉತ್ತುಂಘಕ್ಕೆ ಏರಬೇಕಾದರೆ ಗಡಿಯಾರದ ಮುಳ್ಳಿನ ಹಾಗೆ ಸತತ ಪ್ರಯತ್ನವಿರಬೇಕೆಂದು ಹುಬ್ಬಳ್ಳಿಯ ಖ್ಯಾತ ಚಿಕ್ಕಮಕ್ಕಳ ಹಾಗೂ ಕಿಡ್ನಿ ತಜ್ಞ ತಜ್ಞಡಾ|| ಸೀತಾ ಮುತಾಲಿಕ ಹೇಳಿದರು.
ಅವರು ಐನಾಪೂರ ಪಟ್ಟಣದ ಪ್ರತಿಷ್ಠಿತ ಕೆ.ಆರ್.ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮದ ಅಂಗ ಸಂಸ್ಥೆಗಳ ಮಹಾಸಂಗಮದ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡುತ್ತಾ ನಾನು ಇದೆ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವದು ಹೆಮ್ಮೆ ಎನಿಸುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವ, ರಾಮಾಯಣ, ಮಹಾಭಾರತದಂತಹ ಧಾರ್ಮಿಕ ಜ್ಞಾನದ ಅವಶ್ಯಕತೆ ಇದ್ದು, ದೇಶಭಕ್ತರ ಹಾಗೂ ಉನ್ನತ ಸಾಧನೆಗೈದ ಮಹಾಪುರುಷರ ಬಗ್ಗೆ ಶಿಕ್ಷಕರು ಜ್ಞಾನಾರ್ಜನೆ ನೀಡಬೇಕೆಂದರು.
ಇನ್ನೋರ್ವ ಅತಿಥಿಯಾದ ಸಂಸ್ಥೆಯ ವಿದ್ಯಾರ್ಥಿ ಕೆ.ಎಲ್.ಇ ಸಂಸ್ಥೆಯ ಖ್ಯಾತ ಎಲುಬು ಕೀಲುಗಳ ಮತ್ತು ನರ ತಜ್ಞ ಡಾ|| ಆನಂದಕುಮಾರ ಖಟಾಂವಿ ಮಾತನಾಡುತ್ತಾ ಜೀವನದಲ್ಲಿ ಯಾವುದೇ ಉನ್ನತ ಸ್ಥಾನ ಅಲಂಕರಿಸಬೇಕಾದರೆ ನಿರ್ದಿಷ್ಠವಾದ ಗುರಿ ಹೊಂದಿರಬೇಕು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಮಕ್ಕಳು ಪರಿಶ್ರಮ ವಹಿಸದರೆ ಜೀವನದಲ್ಲಿ ಏನನ್ನಾದರು ಸಾಧಿಸಬಹುದು ಎಂದರು. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದದ್ದು ನನ್ನ ಪೂರ್ವ ಜನ್ಮದ ಪುಣ್ಯಜರುಗಿದ ರೀತಿ ಈ ಸಂಸ್ಥೆಯು ಉತ್ತರೋತ್ತರ ಬೆಳೆದು ಹೆಮ್ಮರವಾಗಲಿ ಎಂದರು.
ಪ.ಪಂ ಅಧ್ಯಕ್ಷೆ ಸರೋಜನಿ ಸುರೇಶ ಗಾಣಿಗೇರ ಮಕ್ಕಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷ ಸಂಜಯ ಭಿರಡಿ ಮಾತನಾಡಿ ಈ ಸಂಸ್ಥೆಯನ್ನು ಜಿ.ಎಮ್ ದೇಶಪಾಂಡೆಯವರು ೧೯೨೪ರಲ್ಲಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಹುಟ್ಟು ಹಾಕಿದ್ದು ಹಾಗೂ ಇಲ್ಲಿಯವರಗೆ ನಡೆದು ಬಂದ ಬಗ್ಗೆ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಕಾರ್ಚಿ, ಮೋಹನರಾವ ಮುತಾಲಿಕ, ರಾಜೇಂದ್ರ ಪೋತದಾರ, ಪ್ರವೀಣ ಗಾಣಿಗೇರ, ಸಂತೋಷ ಪಾಟೀಲ, ಸುರೇಶ ಗಾಣಿಗೇರ ತಮ್ಮಣ್ಣ ಪಾರಶೆಟ್ಟಿ, ಪ್ರವೀಣ ಕುಲಕರ್ಣಿ, ಉದಯ ನಿಡಗುಂದಿ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು.
ವರದಿ: ಮುರಗೇಶ ಗಸ್ತಿ