Ad imageAd image

ಶ್ರೀಮತಿ ದುದೂಬಾಯಿರವರ 5ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ವಿಕಲಚೇತನ ಮಕ್ಕಳಿಗೆ ಪ್ರೀತಿ ಭೋಜನ ಊಟ

Bharath Vaibhav
ಶ್ರೀಮತಿ ದುದೂಬಾಯಿರವರ 5ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ವಿಕಲಚೇತನ ಮಕ್ಕಳಿಗೆ ಪ್ರೀತಿ ಭೋಜನ ಊಟ
WhatsApp Group Join Now
Telegram Group Join Now

ಬೆಂಗಳೂರು : ಭಾರತೀಯ ಸಂಸ್ಕೃತಿ ಸಂಪ್ರದಾಯ ಪರಂಪರೆ ಇತಿಹಾಸ ಬಿಂಬಿಸುವ ಮತ್ತು ಉಳಿಸಿ ಬೆಳೆಸುವ ರಾಷ್ಟ್ರ ಮಟ್ಟದಲ್ಲಿ ಮನೋಭಾವ ಹೊಂದಿದ ಮಾತ್ರೋಶ್ರೀ ‘ಶ್ರೀಮತಿ ದುದೂಬಾಯಿ’ಅವರ ಸುಪುತ್ರ ಡಾ. ಪ್ರವೀಣ್ ಬಾಯಿ ತೊಗಾಡಿಯಾ ಹಿಂದೂಗಳ ರಕ್ಷಣೆಗೆ ಹಗಲು ರಾತ್ರಿ ಕಾಳಜಿ ಇರುವ ಏಕೈಕ ವ್ಯಕ್ತಿ ಪ್ರವೀಣ್ ತೊಗಾಡಿಯಾ ಅವರಿಗೆ ಜನ್ಮ ನೀಡಿದ ‘ತಾಯಿ ಶ್ರೀಮತಿ ದುದೂಬಾಯಿ ಮೋಹನ್’.
ತೊಗಾಡಿಯಾ ತಾಯಿ ಶ್ರೀ ದುದೂಬಾಯಿ ಮೋಹನ್ ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನೆನಪುಗಳು ಕರ್ನಾಟಕ ರಾಜ್ಯದ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಅವರು ಪೀಣ್ಯ ೨ನೇ ಹಂತದಲ್ಲಿ ಇರುವ ಪ್ರದಾನ ಕಚೇರಿಯಲ್ಲಿ ಶ್ರೀಮತಿ ದುದೂಬಾಯಿ ಮೋಹನ್ ಅವರ ಪುಣ್ಯಾರಾಧನೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಪುನಸ್ಕಾರ ಪುಷ್ಪ ನಮನ ಸಲ್ಲಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷ ವಿ.ಆನಂದ್ ಭಾವುಕರಾಗಿ ಮಾತನಾಡಿದರು.
ನಂತರ ಅವರು ತಮ್ಮ ಕಾರ್ಯಕರ್ತರ ಜೊತೆಗೆ ಗೌಡಹಳ್ಳಿಯಲ್ಲಿರುವ ಮಾತೃ ಶ್ರೀ ಮನೋವಿಕಾಸ ಕೇಂದ್ರದಲ್ಲಿ ಇರುವ ವಿಕಲಚೇತನ ಮಕ್ಕಳಿಗೆ ರಾಜ್ಯಾಧ್ಯಕ್ಷ ವಿ.ಆನಂದ್ ಅವರು ಪ್ರೀತಿ ಭೋಜನ ವ್ಯವಸ್ಥೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗೋವಿಂದರಾಜು ಜಿಕೆ ಡಬ್ಲ್ಯೂ ಲೇಔಟ್, ಶಂಕರ್, ಭೀಮ ಸಂದೇಶ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹಮೂರ್ತಿ, ಕರ್ನಾಟಕ ನ್ಯೂಸ್ ಪ್ರೆಸ್ ಕ್ಲಬ್ ಅಧ್ಯಕ್ಷ ಅಯ್ಯಣ್ಣ ಮಾಸ್ಟರ್, ಸಂಜೆ ಸಮಯ ಪತ್ರಿಕೆಯ ಪ್ರತಿನಿಧಿ ಕೆಂಪರಾಜು, ಶ್ರೀಕಾಂತ್, ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಮಹಿಳಾ ಘಟಕದ ಪ್ರದಾನ ಕಾರ್ಯದರ್ಶಿ ಶ್ರೀಮತಿ ಲತಾ ಸೇರಿದಂತೆ ಸಂಘಟನೆಯ ಮುಖಂಡರು ಮಹಿಳೆಯರು ಕಾರ್ಯಕರ್ತರು ಇದ್ದರು.

ವರದಿ :ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!