Ad imageAd image

ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ: ಕೆಂಚಗಾನಹಳ್ಳಿ ಗೋವಿಂದಪ್ಪ ಆಯ್ಕೆ

Bharath Vaibhav
ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ: ಕೆಂಚಗಾನಹಳ್ಳಿ ಗೋವಿಂದಪ್ಪ ಆಯ್ಕೆ
WhatsApp Group Join Now
Telegram Group Join Now

ಪಾವಗಡ : ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನಾಗಲಮಡಿಕೆ ಹೋಬಳಿಯ ಸಾಮಾನ್ಯ ಕ್ಷೇತ್ರ ದ ನಿರ್ದೇಶಕರಾಗಿ ಕೆಂಚಗಾನಹಳ್ಳಿ ಗೋವಿಂದಪ್ಪ ಆಯ್ಕೆಯಾಗಿದ್ದಾರೆ.

ಪಟ್ಟಣದ ಗುರುಭವನ ಮೈದಾನದ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪಾವಗಡ ತಾಲೂಕು 2025 ರಿಂದ 5 ವರ್ಷ ಗಳ ಅವಧಿಗೆ ದಿನದ 25.1.2025 ರಂದು ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಕೆಂಚಗಾನಹಳ್ಳಿ ಗೋವಿಂದಪ್ಪ ಜಯಶೀಲರಾಗಿದ್ದಾರೆ.

ನೂತನ ನಿರ್ದೇಶಕ ಗೋವಿಂದಪ್ಪ ಮಾತನಾಡಿ
ನಾಗಲಮಡಿಕೆ ಹೋಬಳಿಯ ಸಹಕಾರಿ ಬಂಧುಗಳು ರೈತ ಮುಖಂಡರು ನನ್ನ ಪರವಾಗಿ ಮತಚಲಾಯಿಸಿ ನನ್ನ ಕೊನೆ ಚುನಾವಣೆಯಲ್ಲಿ ಜಯಶೀಲರನ್ನಾಗಿ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಚುನಾವಣೆಯಲ್ಲಿ ಮೂರು ಪಕ್ಷದ ನಾಯಕರು,ಮುಖಂಡರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ರೈತರ ಪರವಾಗಿ ಕೆಲಸ ಮಾಡುವೆ.

ಚುನಾವಣಾಧಿಕಾರಿ ವೆಂಕಟೇಶ್ ಮಾತನಾಡಿ ಪ್ರಾಥಮಿಕ ಸಹಕಾರಿ ಸಂಘ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರ ಆಯ್ಕೆ ಚುನಾವಣೆಗೆ ಜ.17 ಕೊನೆಯ ದಿನಾಂಕದವರೆಗೆ ಒಟ್ಟು 48 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಸಾಲಗಾರರ ಮತ್ತು ಸಾಲಗಾರರಲ್ಲದ 13 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಗಲಮಡಿಕೆ ಹೋಬಳಿ ಸಾಮಾನ್ಯ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆದು ಅನಿತ, ಅಂಗಡಿ ಚಿರಂಜೀವ ಇವರಿಬ್ಬರ ವಿರುದ್ದವಾಗಿ ಒಂದು ಮತ ಅಂತರರಿಂದ ಕೆಂಚಗಾನಹಳ್ಳಿ ಎಸ್.ವಿ ಗೋವಿಂದಪ್ಪ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

ಈ ವೇಳೆ ಜೆ.ಡಿ.ಎಸ್ ಅಧ್ಯಕ್ಷ ಎನ್.ಎ ಈರಣ್ಣ, ಬಲರಾಮರೆಡ್ಡಿ, ಗೌರವ ಅಧ್ಯಕ್ಷ ರಾಜಶೇಖರಪ್ಪ, ಮಂಜುನಾಥ ಚೌದರಿ, ಗಂಗಾಧರ್ ನಾಯ್ಡು, ನರೇಶ್, ಶಾಂತಿ ಮೆಡಿಕಲ್ ದೇವರಾಜ್, ರಾಮಾಂಜಿನರೆಡ್ಡಿ, ಜೆ.ಡಿಎಸ್. ಯುವ ಘಟಕದ ಅಧ್ಯಕ್ಷ ಗೋಪಾಲ್, ಶೇಷಗಿರಿ, ಪೆದ್ದಾರೆಡ್ಡಿ,ನರಸಿಂಹಮೂರ್ತಿ, ತಿಮ್ಮಾನಾಯ್ಡು, ಕಾವಲಗೆರೆ ರಾಮಾಂಜಿ, ಮುಖಂಡ ಗೋಪಾಲ್, ಈರಣ್ಣ ಇನ್ನು ಮುಂತಾದವರು ಹಾಜರಿದ್ದರು.
ವರದಿ: ಶಿವಾನಂದ ಪಾವಗಡ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!