ನವದೆಹಲಿ : ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಹುಲಿ ವೇಷ ತೊಟ್ಟು ಕುಣಿತದ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಾಡಿಹೊಗಳಿದರು.
ಪ್ರಧಾನಿಯವರು ಇಂದು ತಮ್ಮ 119ನೇ ಮನ್ ಕೀ ಬಾತ್ ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪಿಸಿ, ದೇಶವನ್ನು ಉದ್ದೇಶಿಸಿ ಮಾತನಾಡಿದರು.
ವಿಶೇಷವಾಗಿ ಕರ್ನಾಟಕದ ಜನಪದ ಕಲೆಯಾಗಿರುವ ಹುಲಿ ವೇಷ ಕುಣಿತವನ್ನು ಉಲ್ಲೇಖಿಸಿದರಲ್ಲದೇ ಹುಲಿ ವೇಷ ಹಾಕುವವರ ಬಗ್ಗೆಯೂ ಗುಣಗಾನ ಮಾಡಿದರು.
ಪ್ರಸ್ತುದ ದಿನಗಳಲ್ಲೂ ಪ್ರಾಣಿ ಹಾಗೂ ಮಾನವನ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಹೀಗಿರುವಾಗ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಸೋಲಿಗ ಸಮುದಾಯದವರು ಹುಲಿಗಳನ್ನು ಉಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹುಲಿಗಳನ್ನು ಸಂರಕ್ಷಿಸಿರುವ ಕ್ರೆಡಿಟ್ ಸೋಲಿಗರಿಗೇ ಸಲ್ಲಬೇಕು. ಚಾಮರಾಜನಗರದಲ್ಲಿ ಬಿಆರ್ಟಿ ಅರಣ್ಯವಿದ್ದು, ಇಲ್ಲಿ ಅತಿಹೆಚ್ಚು ಹುಲಿಗಳಿವೆ ಎಂದು ಮೋದಿಯವರು ಒತ್ತಿ ಹೇಳಿದರು.




