ಹರಿಯಾಣ : ವಕ್ಫ್ ತಿದ್ದುಪಡಿಯನ್ನು ವಿರೋಧಿಸಿ ಒಂದೆಡೆ ಹಿಂಸಾಚಾರ ನಡೆಯುತ್ತಿದ್ದರೆ, ಇತ್ತ ವಕ್ಫ್ ಹೆಸರಿನಲ್ಲಿ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಭೂ ಮಾಫಿಯಾ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ವಕ್ಫ್ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿ ಇದೆ. ವಕ್ಫ್ ಆಸ್ತಿಗಳ ಪ್ರಯೋಜನಗಳನ್ನು ನಿರ್ಗತಿಕರಿಗೆ ನೀಡಿದ್ದರೆ, ಅದು ಅವರಿಗೆ ಪ್ರಯೋಜನವಾಗುತ್ತಿತ್ತು. ಆದರೆ ಈ ಆಸ್ತಿಗಳಿಂದ ಲಾಭ ಪಡೆದ ಭೂ ಮಾಫಿಯಾ ಎಂದು ಕಿಡಿಕಾರಿದರು.
ವಕ್ಫ್ ತಿದ್ದುಪಡಿಯಿಂದ ರೈತರು ಸಿಟ್ಟುಸಿರು ಬಿಟ್ಟಿದ್ದಾರೆ, ಈ ತಿದ್ದುಪಡಿ ಮಾಡಿದ ಬಳಿಕ ವಕ್ಫ್ ಬಡವರ ಆಸ್ತಿಯನ್ನೂ ಲೂಟಿ ಮಾಡೋದು ನಿಲ್ಲುತ್ತದೆ.
ಹೊಸ ವಕ್ಫ್ ಕಾನೂನಿನಡಿಯಲ್ಲಿ, ಯಾವುದೇ ಆದಿವಾಸಿಗಳಿಗೆ ಸೇರಿದ ಭೂಮಿ ಅಥವಾ ಆಸ್ತಿಯನ್ನು ವಕ್ಫ್ ಮಂಡಳಿ ಮುಟ್ಟಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು.
ವಕ್ಫ್ ಹೆಸರಿನಲ್ಲಿ ವಶಪಡಿಸಿಕೊಂಡ ಜಮೀನಿನಿಂದ ಯಾವುದೇ ವ್ಯಕ್ತಿಯು ಅದರ ಸದುಪಯೋಗ ಪಡೆಯುತ್ತಿಲ್ಲ, ಕೇವಲ ಆಸ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಅಷ್ಟೇ.. ಅದೇ ಈ ತಿದ್ದುಪಡಿಯಿಂದ ಬಡ ಮುಸ್ಲಿಮರು ಮತ್ತು ಪಸ್ಮಾಂಡ ಮುಸ್ಲಿಮರು ತಮ್ಮ ಹಕ್ಕುಗಳನ್ನು ಪಡೆಯುತ್ತಾರೆ. ಇದು ನಿಜವಾದ ಸಾಮಾಜಿಕ ನ್ಯಾಯ ನೀಡುತ್ತದೆ ಎಂದು ಹೇಳಿದರು.