ಸೇಡಂ: ವಿಕಸಿತ ಭಾರತ ನಿರ್ಮಾಣದ ಮಹತ್ವಾಕಾಂಕ್ಷೆಯೊಂದಿಗೆ ದೇಶಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ನಿಸ್ವಾರ್ಥ ಕರ್ಮಯೋಗಿ, ಅಭಿವೃದ್ದಿಯ ಹರಿಕಾರ, ದೇಶದ ಹೆಮ್ಮೆಯ ಪ್ರಧಾನಿ “ಸನ್ಮಾನ್ಯ ಶ್ರೀ ನರೇಂದ್ರ ಮೋದಿ” ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ದಿನಾಂಕ 17/09/2025 ರಂದು ಸಾಯಂಕಾಲ 06:20 ನಿಮಿಷಕ್ಕೆ ತಾಲೂಕಿನ ಮುಧೋಳ್ ಬಸ್ಟಾಂಡ್ ಹತ್ತಿರ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಪ್ರಧಾನಿ ಮೋದಿ ಹುಟ್ಟುಹಬ್ಬದ ನಿಮಿತ್ಯ ಡಾ. ವೆಂಕಟ್ ರಾವ್ ಮಿಸ್ಕಿನ್ ಮೋದಿ ಅವರ ಗುಣಗಾನ ಮಾಡಿದರು. ಅದೇ ರೀತಿಯಲ್ಲಿ ನರೇಶ್ ಗುಂಡೇಪಲ್ಲಿ ಅವರು ಮೋದಿ ಅಭಿಮಾನಿ ಬಳಗವನ್ನು ಹಾಡಿಸಿ ರಂಜಿಸಿದರು. ಮೋದಿ ಅಭಿಮಾನಿ ಬಳಗದಿಂದ ಅನ್ನಪ್ರಸಾದ ಕಾರ್ಯಕ್ರಮ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ನಾಗರೆಡ್ಡಿ ಪೊಲೀಸ್ ಪಾಟೀಲ್, ಡಾ.ವೆಂಕಟರಾವ್ ಮಿಸ್ಕಿನ್, ಅನಿಲ್ ರೆಡ್ಡಿ ಸಂಗಂಪಲ್ಲಿ,ಲಕ್ಷ್ಮಿಕಾಂತ್ ಹೊನಕೇರಿ, ರವಿ ರಾಠೋಡ್ ಕಡತಲ ತಂಡ, ವಿಜಯಕುಮಾರ್ ಖೇವುಜಿ, ದತ್ತಾತ್ರೇಯ ಆಡಿಕಿ, ಶ್ರೀನಿವಾಸ್ ಬೋಯಿನಿ, ಜಗ್ಗು ಉಪಾರ, ಶರಣಪ್ಪ ಜಕ್ಕನ್ ಬೋಯಿ, ರಾಘವೇಂದ್ರ ಕಿಟ್ಟದ್, ಮೋಹನ್ ಕಾನುಕುರ್ತಿ, ಜಯಪ್ಪ ಪರಮ, ಭೀಮಪ್ಪ ಕಸ್ತೂರಿ ಪಲ್ಲಿ, ಮಲ್ಲಪ್ಪ ಪರಮ, ಹನುಮಂತ ಚತ್ತಾಪಲ್ಲಿ, ಹಾಗೂ ಭಾರತೀಯ ಜನತಾ ಪಕ್ಷ ಹಿರಿಯರು ಕಿರಿಯರು ಹಾಗೂ ಚುನಾಯಿತ ಪ್ರತಿನಿಧಿಗಳು ಪ್ರತಿ ಬೂತಿನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಹಾಗೂ ಪಕ್ಷದ ಜವಾಬ್ದಾರಿ ಕಾರ್ಯಕರ್ತರು ವ್ಯಾಪಾರಸ್ಥರು ಹಾಗೂ ಮೋದಿ ಅಭಿಮಾನಿ ಬಳಗ ಸೇರಿದರು. ಈ ಕಾರ್ಯಕ್ರಮ ಸ್ವಾಗತ ಮತ್ತು ನಿರೂಪಣೆ ತಮ್ಮಪ್ಪ ಬಾಗಳಿ ಅವರು ನೆರವೇರಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್



