ಇಸ್ಲಾಮಾಬಾದ್ : ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಕಿಸ್ತಾನದ ಇಸ್ಲಮಾಬಾದ್ಗೆ ತೆರಳಿದ್ದಾರೆ.
ಜೈಶಂಕರ್‌ರವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪಾಕ್ ಮುಖಂಡರು ರಾತ್ರಿಯ ಡಿನ್ನರ್ ಪಾರ್ಟಿಯಲ್ಲಿ ಭವ್ಯ ಸ್ವಾಗತ ನೀಡಿದ್ದಾರೆ.ಈ ವೇಳೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಜೈಶಂಕರ್ಗೆ ಕೈಕುಲುಕಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.
9 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಇದೀಗ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ನಾಯಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮತ್ತು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಇಂದು ಅಪರೂಪದ ಹಸ್ತಲಾಘವ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡ ವಿಡಿಯೋ ವೈರಲ್ ಆಗಿದೆ
2015ರ ಡಿಸೆಂಬರ್ 8-9ರಲ್ಲಿ ನಡೆದ ಅಫ್ಘಾನಿಸ್ತಾನದ ‘ಹಾರ್ಟ್ ಆಫ್ ಏಷ್ಯಾ’ ಸಮ್ಮೇಳನದಲ್ಲಿ ಭಾಗವಹಿಸಲು ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ತೆರಳಿದ್ದರು. ಅದಾದ ನಂತರ ಈಗ ಜೈಶಂಕರ್ ಪಾಕ್‌ಗೆ ಭೇಟಿ ನೀಡಿದ್ದಾರೆ
ಪಾಕಿಸ್ತಾನ, ಚೀನಾ, ಭಾರತ, ರಷ್ಯಾ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಬೆಲಾರಸ್ ದೇಶಗಳನ್ನೊಳಗೊಂಡು ಈ ಶೃಂಗಸಭೆ ಆಯೋಜಿಸಿದ್ದು ಮೋದಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿತ್ತು ಆದರೆ ಭಾತರದ ಪ್ರತಿನಿಧಿಯಾಗಿ ಜೈಶಂಕರ್ ಪಾಕ್‌ಗೆ ಭೇಟಿ ನೀಡಿದ್ದಾರೆ