ನಿಪ್ಪಾಣಿ : ಹೌದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸಂವಿಧಾನವೇ ಸರ್ವೋಚ್ಚ ಸರ್ವಶ್ರೇಷ್ಠ. ದೇಶದಲ್ಲಿ ಯಾವುದೇ ವ್ಯಕ್ತಿ ದೊಡ್ಡ ಅಧಿಕಾರಿಯಾಗಿದ್ದರೂ ಪ್ರಧಾನಿಯೇ ಆಗಿದ್ದರು ರಾಷ್ಟ್ರಪತಿ,ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದರು ಕೂಡ ತನ್ನ ಕಾರ್ಯಗಳನ್ನು ನಡೆಸಬೇಕಾದರೆ ಅಧಿಕಾರ ಬಳಸಬೇಕಾದರೆ ಅದು ಸಂವಿಧಾನಾತ್ಮಕವಾಗಿದ್ದರೆ ಮಾತ್ರ ಸಾಧ್ಯ. ಆದ್ದರಿಂದ ಸಂವಿಧಾನವೇ ಸರ್ವಶ್ರೇಷ್ಠವಾದದ್ದು ಎಂದು ಚಿಕ್ಕೋಡಿಯ ಕೆಎಲ್ಇ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದುಂಡೆಪ್ಪ ಸೋಲಾಪುರೆ ತಿಳಿಸಿದರು.
ಅವರು ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ಕುಸುಮಾವತಿ ಮಿರಜಿ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಕಿರಣ್ ಚೌಗುಲೆ ಅಧ್ಯಕ್ಷೀಯ ಭಾಷಣ ಮಾಡಿದರು. ಸಮಾರಂಭದಲ್ಲಿ ಪ್ರಾಚೀ ಪಾಟೀಲ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿಯ ಮುಖ್ಯ ಅತಿಥಿಗಳಿಂದ ಹಾಗೂ ಸ್ನೇಹಾ ಕಳಂತ್ರೆ ಅವರಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಡಾಕ್ಟರ್ ಗೋಪಾಲ್ ಮಹಾಮುನಿ, ಪ್ರೊಫೆಸರ್ ಚೈತ್ರಾ,ಪ್ರೊಫೆಸರ್ ಮಲ್ಲಿಕಾ,ವೀರಶ್ರೀ ಗುಂಡವಾಡೆ, ಅಶ್ವಿನಿ ಪಾಟೀಲ್, ಪ್ರವೀಣ್ ದೇಸಾಯಿ, ಡಾಕ್ಟರ್ ಹೊಂಬಯ್ಯ ಸೇರಿದಂತೆ ಕುಸುಮಾವತಿ ಮಿರ್ಜಿ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾಲೇಜಿನ ಸಂಸ್ಕೃತಿಕ ಸಮಿತಿ, ರಾಜ್ಯಶಾಸ್ತ್ರ ವಿಭಾಗ, ಎನ್ಎಸ್ಎಸ್ ಹಾಗೂ ಈ ಎಲ್ ಸಿ ವಿಭಾಗದಿಂದ ಕಾರ್ಯಕ್ರಮ ಸಂಯೋಜಿಸಲಾಗಿತ್ತು.ನಿಶಾ ಹಾಗೂ ತಂಡದವರಿಂದ ಪ್ರಾರ್ಥನೆ ಗೀತೆ,ಡಾ. ಜಿ.ಪಿ. ಸವದಿ ಅವರಿಂದ ಸ್ವಾಗತ, ಹಾಗೂ ವಾಸಂತಿ ಮಾಳಗೆ ಅವರಿಂದ ವಂದನಾರ್ಪಣೆ ನಡೆಯಿತು.
ವರದಿ:ಮಹಾವೀರ ಚಿಂಚಣೆ