Ad imageAd image

ಜನರು ಉಸಿರಾಡಲು ಮಾತ್ರ ಮೋದಿ ಟ್ಯಾಕ್ಸ್ ಹಾಕಿಲ್ಲ, ಉಳಿದೆಲ್ಲದ್ದಕ್ಕೂ ಹಾಕಿದ್ದಾರೆ : ಪ್ರಿಯಾಂಕ್ ಖರ್ಗೆ 

Bharath Vaibhav
ಜನರು ಉಸಿರಾಡಲು ಮಾತ್ರ ಮೋದಿ ಟ್ಯಾಕ್ಸ್ ಹಾಕಿಲ್ಲ, ಉಳಿದೆಲ್ಲದ್ದಕ್ಕೂ ಹಾಕಿದ್ದಾರೆ : ಪ್ರಿಯಾಂಕ್ ಖರ್ಗೆ 
priyanka kharge
WhatsApp Group Join Now
Telegram Group Join Now

ಕಲಬುರಗಿ : ಜನರು ಉಸಿರಾಡಲು ಮಾತ್ರ ಮೋದಿ ಟ್ಯಾಕ್ಸ್ ಹಾಕಿಲ್ಲ, ಉಳಿದೆಲ್ಲದ್ದಕ್ಕೂ ಹಾಕಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.

ರಿಂಗ್ ರಸ್ತೆಯ ಮೊಘಲ್ ಗಾರ್ಡನ್ ನಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ‘ ದೇಶದ ಸ್ವಾತಂತ್ರ್ಯ ಹಿನ್ನಲೆ, ಮಹಮ್ಮದ್ ಇಕ್ಬಾಲ್ ಬರೆದ ಹಾಗೂ ರವಿಶಂಕರ್ ಅವರು ಹಾಡಿದ ‘ಸಾರೇ ಜಹಾಂಸೆ ಅಚ್ಛಾ ಹಿಂದೂಸ್ಥಾನ ಹಮಾರಾ’ ಕವಿತೆಯ ಆಶಯದಂತೆ ನಾವೆಲ್ಲರೂ ಒಂದೇ ಎನ್ನುವುದು ಕಾಂಗ್ರೆಸ್ ಪಕ್ಷದ ತತ್ವವಾಗಿದೆ.ಆದರೆ ಬಿಜೆಪಿಯ ತತ್ವ ಇದರ ವಿರುದ್ಧ, ಅವರದ್ದೇನಿದ್ದರೂ ಧರ್ಮಗಳನ್ನು ವಿಭಜಿಸುವ ಕೆಲಸ ಮಾಡುತ್ತಾರೆ.

ರಾಜ್ಯ ಸರ್ಕಾರದ ಗ್ಯಾರಂಟಿಗಳಾದ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಂದ ರಾಜ್ಯದ ಜನರಿಗೆ ಅನುಕೂಲವಾಗಿದೆ. ಆದರೆ, ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಎಲ್ಲಾ ಯೋಜನೆಗಳನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ. ಅಂತವರಿಗೆ ಮತ ನೀಡಬೇಕೆ? ಎಂದರು.

ಕಾಂಗ್ರೆಸ್ ಗ್ಯಾರಂಟಿಗಳನ್ನು ಸುಳ್ಳು ಎನ್ನುವ ಬಿಜೆಪಿ ಸಂಸದರೇ.. ,

 

* ಬಿಜೆಪಿ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದು ಸುಳ್ಳೇ?

* ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು ಸುಳ್ಳೇ?

* ಮೊಸರು ಖರೀದಿ ಮಾಡುವುದಕ್ಕೂ ತೆರಿಗೆ ಕಟ್ಟುವ ಪರಿಸ್ಥಿತಿ ಬಂದಿರುವುದು ಸುಳ್ಳೇ?

ಜನರು ಉಸಿರಾಡಲು ಮಾತ್ರ ಮೋದಿ ಟ್ಯಾಕ್ಸ್ ಹಾಕಿಲ್ಲ ಬಿಟ್ಟರೆ ಉಳಿದೆಲ್ಲದ್ದಕ್ಕೂ ಟ್ಯಾಕ್ಸ್ ಹಾಕಿದ್ದಾರೆ ನೆನಪಿರಲಿ.ಆದ್ದರಿಂದ ದೇಶದಲ್ಲಿ ಸುಭದ್ರ ಮತ್ತು ಸುರಕ್ಷಿತವಾದ ಸರ್ಕಾರ ರಚನೆಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!