ಅಥಣಿ : ಚಿಕ್ಕೋಡಿ ಲೋಕಸಭಾ ಸಂಸದರಾದ ಕುಮಾರಿ ಪ್ರಿಯಾಂಕ ಜಾರಕಿಹೊಳಿ ಅವರು ಅಥಣಿ ಮತಕ್ಷೇತ್ರದ ತೆಲಸಂಗ ಮತ್ತು ಐಗಳಿ ಜಿಲ್ಲಾ ಪಂಚಾಯಿತಿ ಮತಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಕಕಮರಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಕೊಟ್ಟಲಗಿ ಗ್ರಾಮದ ಸಿದ್ದಾರೋಡ ಮಠಕ್ಕೆ ಭೇಟಿ ಕೊಟ್ಟು ದೇವರ ದರ್ಶನ್ ಪಡೆದರು.
ನಂತರ ರಾಮತೀರ್ಥ ಗ್ರಾಮದ ಉಮಾರಾಮೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದರು ಹಾಗೂ ಐಗಳಿ ಗ್ರಾಮದ ಹುತಾತ್ಮರಾದ ವೀರಯೋಧ ಕಿರಣ್ ಕುಮಾರ್ ತೆಲಸಂಗ ಅವರ ಮನೆಗೆ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು ನಂತರ ಇತ್ತೀಚಿಗೆ ನಿಧನರಾದ ಅಡಹಳ್ಳಿ ಗ್ರಾಮದ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಬಸಪ್ಪ ಕೆಂಚನ್ನವರ್ ಅವರ ಮನೆಗೆ ಭೇಟಿಕೊಟ್ಟು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು ನಂತರ ಕಾರ್ಯಕರ್ತರ ಮನೆಗಳಿಗೆ ಭೇಟಿ ಕೊಡಲಾಯಿತು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸದಾಶಿವ್ ಬುಟ್ಟಾಳೆ ಗಜಾನನ ಮಂಗಸುಳಿ ರಮೇಶ್ ಸಿಂದಗಿ ರಾವಸಾಹೇಬ್ ಐಹೊಳೆ ಸಿದ್ದಾರ್ಥ ಸಿಂಗೆ ಸುನಿತಾ ಐಹೊಳೆ ಸೇರಿದಂತೆ ಆಯಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




