ಸಿಂಧನೂರು : ಜೈ ಭೀಮ್ ಬಂಧುಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ&ಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ ಜೀ ಅವರ 47ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಸಿಂಧನೂರು ತಾಲೂಕಿನ “ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ” ಸಂಘಟನೆ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು -ಬ್ರೇಡ್ ನೀಡುವ ಮೂಲಕ ಪ್ರಿಯಾಂಕ ಖರ್ಗೆ ಜಿ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ ಅವರಿಗೆ ದೇವರು ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ ಹಾಗೂ ಮತ್ತಷ್ಟು ಜನಸೇವೆಯನ್ನು ಮಾಡಲು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ, ಚಲವಾದಿ ಮಹಾಸಭಾ ತಾಲೂಕ ಉಪಾಧ್ಯಕ್ಷ ವೀರೇಶ್ ಹಂಚಿನಾಳ ಕೆ. ಜಿಲ್ಲಾ ಉಪಾಧ್ಯಕ್ಷ ಅಂಬಣ್ಣ ಮಲ್ಕಾಪುರ. ಮುಖಂಡರಾದ ಪಂಪ ಪತಿ ಬೂದಿವಾಳ. ಹೊನ್ನೂರು ಕಟ್ಟಿಮನಿ. ವೀರೇಶ್ ಸುಲ್ತಾನಾಪುರ. ಶಿವಕುಮಾರ್ ಮಲ್ಲಾಪುರ. ಹನುಮಂತ ಮಲ್ಲಾಪುರ. ಮಾರೆಪ್ಪ ರಾಮತ್ನಾಳ. ಪಂಪಾಪತಿ ಸಾಸುಮರಿ ಸೇರಿದಂತೆ ಇನ್ನೂ ಅನೇಕರಿದ್ದರು.
ವರದಿ: ಬಸವರಾಜ ಬುಕ್ಕನಹಟ್ಟಿ




