ಚಂದಿಗಢ: 24 ವರ್ಷದ ಯುವ ಆಟಗಾರ ಪ್ರಿಯಾನ್ಸ್ ಆರ್ಯ ಅವರ ವೇಗದ ಶತಕ 103 ( 42 ಎಸೆತ, 7 ಬೌಂಡರಿ, 9 ಸಿಕ್ಸರ್) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯಾವಳಿಯ 22 ನೇ ಲೀಗ್ ಪಂದ್ಯದಲ್ಲಿ 6 ವಿಕೆಟ್ ಗೆ 219 ರನ್ ಗಳಿಸಿದ್ದು, ಎದುರಾಳಿ ತಂಡಕ್ಕೆ 220 ರನ್ ಗಳ ಗೆಲುವಿನ ಗುರಿ ನೀಡಿತು.
ಮೊದಲು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಸತತ ವಿಕೆಟ್ ಕಳೆದುಕೊಂಡರೂ, ಪ್ರಯಾನ್ಸ್ ಆರ್ಯ ಹಾಗೂ ಶಶಾಂಕ ಸಿಂಗ್ ತಂಡವನ್ನು ಮತ್ತೆ ಸಂಕಷ್ಟದಿಂದ ಹೊರ ತಂದರು. ಶಶಾಂಕ ಸಿಂಗ್ 36 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ನೆರವಿನಿಂದ ಅಜೇಯ 52 ರನ್ ಗಳಿಸಿದರು. ಮಾರ್ಕೋ ಜಾನ್ಸ್ ಅಜೇಯ 34 ರನ್ ಗಳಿಸಿದರು.