Ad imageAd image
- Advertisement -  - Advertisement -  - Advertisement - 

ಕೊಲೆ ಮಾಡಿದ ಆರೋಪಗಳಿಗೆ ಗಲ್ಲು ಶಿಕ್ಷೆ ವಿಧಿಸಿ! ದಲಿತ ಪರ ಸಂಘಟನೆಗಳ ಒತ್ತಾಯ!!

Bharath Vaibhav
ಕೊಲೆ ಮಾಡಿದ ಆರೋಪಗಳಿಗೆ ಗಲ್ಲು ಶಿಕ್ಷೆ ವಿಧಿಸಿ! ದಲಿತ ಪರ ಸಂಘಟನೆಗಳ ಒತ್ತಾಯ!!
WhatsApp Group Join Now
Telegram Group Join Now

ಸಿಂಧನೂರು  :-ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದ ಮರಿಯಮ್ಮ ಅಂತರ್ಜಾತಿ ವಿವಾಹವಾದ ದಲಿತ ಯುವತಿಯನ್ನು ಅಲ್ಲೇ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು.. ತಸಿಲ್ದಾರರು ಸಿಂಧನೂರು ಇವರ ಮೂಲಕ — ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ “ದಲಿತ ಪರ ಸಂಘಟನೆಗಳ ಒಕ್ಕೂಟ” ಸಿಂಧನೂರು ಆಗ್ರಹಿಸುವುದೇನೆಂದರೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳ ಗತಿಸಿದರು ಇನ್ನುವರೆಗೆ ದಲಿತರಿಗೆ ಶೋಷಿತರಿಗೆ ಅಸ್ಪೃಶ್ಯತೆಗೆ ನೈಜವಾದ ಸ್ವಾತಂತ್ರ ದೊರಕದೇ ಇರುವುದು ಇಡೀ ಮಾನವನ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ ಈ ದೇಶದ ಜಾತಿ ವ್ಯವಸ್ಥೆ ಎನ್ನುವುದು ಬಹುದೊಡ್ಡ ಸಾಮಾಜಿಕ ಪಿಡಿಗಾಗಿ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರದಿಂದ ಹೊಡೆದಾಳುವ ಕುಟಿಲ ನೀತಿ ಮಿತಿಮೀರಿದೆ ಕೊಪ್ಪಳ ಜಿಲ್ಲೆಯ ಸಂಗನಾಳ ಗ್ರಾಮದ “ದಲಿತ ಯುವಕ ಯಮನೂರಪ್ಪನ” ಕೊಲೆ ಮಾಸುವ ಮುನ್ನವೇ ಮತ್ತೊಂದು ಘನ ಘೋರ ಇದೇ ಜಿಲ್ಲೆಯಲ್ಲಿ ನಡೆದು ಹೋಗಿದೆ ದಿನಾಂಕ  29.8.2024 ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದ ದಲಿತ ಸಮುದಾಯದ ಯುವತಿ ಮರಿಯಮ್ಮ 21 ವಯಸ್ಸು ಗಂಡನ ಮನೆಯವರ ಕಡೆಯಿಂದ ಕೊಲೆಯಾದ ದುರ್ದೈವಿ ಯುವತಿ ಅದೇ ವಿಠಲಪುರ ಗ್ರಾಮದ ನಾಯಕ ಸಮುದಾಯದ ಯುವಕ ಹನುಮಂತಯ್ಯ ಅವರ ಪರಿಚಯವಾಗುತ್ತದೆ .

ಎರಡು ವರ್ಷಗಳಿಂದ ಅವರು ಪರಸ್ಪರ ಪ್ರೀತಿಸುತ್ತಿದ್ದರು ನಂತರ ಕುಟುಂಬದವರನ್ನು ಒಪ್ಪಿಸಿ 2023 ಏಪ್ರಿಲ್ ನಲ್ಲಿ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು ಮರಿಯಮ್ಮನನ್ನು ತಮ್ಮ ಮನೆಯಲ್ಲಿ ಸೇರಿಸಿಕೊಳ್ಳದೆ ಮನೆ ಪಕ್ಕದ ಶೆಡ್ಡಿನಲ್ಲಿ ವಾಸಮಾಡಲು ಸೂಚಿಸಿದರು ಯುವತಿ ಮಾಡಿದ ಅಡಿಗೆಯನ್ನು ಅವರು ತಿನ್ನುತ್ತಿರಲಿಲ್ಲ ತಮ್ಮ ಕುಟುಂಬದಿಂದ ಅವಳನ್ನು ದೂರಟ್ಟು ನಿಂದಿಸುತ್ತಿದ್ದರು ಆಗಸ್ಟ್ 29ರಂದು ಮರಿಯಮ್ಮಳನ್ನು ಮನ ಬಂದಂತೆ ದಳಿಸಿ ಅನುಮಾನ ಬರದಂತೆ ವಿಷ ಉಣಿಸಿ ಕೊಲೆ ಮಾಡಿದ್ದಾರೆಂದು ಕುಟುಂಬದವರ ಆರೋಪವಾಗಿದೆ

ಯುವತಿಯ ಕೊಲೆಗೆ ಕಾರಣವಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಿ ಮೃತ ಯುವತಿಯ ಕುಟುಂಬಕ್ಕೆ ಸೂಕ್ತ ಸರಕಾರಿ ಸೌಲಭ್ಯ ಒದಗಿಸಬೇಕು ಮತ್ತು ಶತಶತಮಾನಗಳಿಂದಲೂ ಆಚರಣೆಯಲ್ಲಿರುವ ಈ ಕೆಟ್ಟ ಜಾತಿ ಪದ್ಧತಿ ವ್ಯವಸ್ಥೆಯನ್ನು ಮೆಟ್ಟಿ ಹಾಕಲು ಸರ್ಕಾರ ಕಠಿಣ ಕಾನೂನು ಜರಿಸಬೇಕೆಂದು ಮನವಿ ಮಾಡಿದರು… ಈ ಸಂದರ್ಭದಲ್ಲಿ. ಎಂ ಗಂಗಾಧರ್ ರಾಜ್ಯಸಭೆ ಸದಸ್ಯರು. ಸಿಪಿಐ (ಎಂಎಲ್) ಮೌನೇಶ್ ಜಾಲವಾಡಗಿ. ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷರು.. ಗುರುರಾಜ್ ಮುಕುಂದ. ದಲಿತ ಮುಖಂಡರು.. ಪಂಪಾಪತಿ ಹಂಚಿನಾಳ.. ಆಲಂಬಾಷ್ ಬೂದಿಹಾಳ..ಶಿವು ಉಪ್ಪಲದೊಡ್ಡಿ.. ನಾಗರಾಜ್ ಸಾಸಲಮರಿ.. ವೀರೇಶ್.ಕೆ ಹಂಚಿನಾಳ.. ಸಂಗಮೇಶ್ ಮುಳ್ಳೂರು.. ಮಹೇಶ ಸಿಂಧನೂರ.. ಯಮನೂರು ಬಸಾಪುರ..ಈರಣ್ಣ ಸುಲ್ತಾನಾಪುರ.. ಇದ್ದರು

 ವರದಿ:- ಬಸವರಾಜ ಬುಕ್ಕನಹಟ್ಟಿ 

WhatsApp Group Join Now
Telegram Group Join Now
Share This Article
error: Content is protected !!