ಬಸವನ ಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಇವಣಗಿಯ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ಬಸವನಬಾಗೇವಾಡಿಯ ೧೦ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಜನಪದ ಸಂಭ್ರಮದ ಗೋಷ್ಠಿಯನ್ನು ಸಿಂದಗಿಯ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಪ್ರೊ. ಬಿ.ಎನ್.ಪಾಟೀಲ ಉದ್ಘಾಟಿಸಿ ಮಾತನಾಡಿದ ಅವರು ಜನಪದ ಸಾಹಿತ್ಯ ನಮಗೆ ಹಲವಾರು ಬದುಕಿನ ಪಾಠಗಳನ್ನು ಕಲಿಸಿಕೊಟ್ಟಿದೆ. ಹಳ್ಳಿಗಾಡಿನ ಬದುಕು ಜನಪದ ಸಾಹಿತ್ಯದ ಮೂಲ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ ಜಾನಪದ ಸಾಹಿತ್ಯದ ಅತ್ಯಂತ ಹುಲುಸಾಗಿ ಬೆಳೆಯುವ ಮೂಲಕ ಗೀಗಿ ಪದ, ಕಂಸಾಳೆ, ಕರಡಿ ಮಜಲು, ಕೋಲಾಟ, ಬೀಸುವ ಪದಗಳು, ಸುಗ್ಗಿ ಹಾಡುಗಳು ಹೀಗೆ ಹಲವಾರು ಪ್ರಕಾರಗಳಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಬರುವ ನೋವು ನಲಿವುಗಳಿಗೆ ಜೀವ ತುಂಬಲು ಸಾಧ್ಯವಾಗಿದ್ದು ಜನಪದ ಸಾಹಿತ್ಯದಿಂದ ಮಾತ್ರ ಎಂದರು.
“ಸಮಾಜಕ್ಕೆ ಜಾನಪದ ಸಾಹಿತ್ಯದ ಕೊಡುಗೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ತಾಳಿಕೋಟೆಯ ಜಾನಪದ ವಿದ್ವಾಂಸರು, ಸಾಹಿತಿ, ಶಿವಲೀಲಾ ಮುರಾಳ ಮಾತನಾಡುತ್ತಾ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ನಮ್ಮ ಇಂದಿನ ಯುವ ಪೀಳಿಗೆಗೆ ನಮ್ಮ ದೇಶದ ಮೂಲ ಜನಪದದ ಶೈಲಿಯಲ್ಲಿರುವ ಕುಟ್ಟುವ, ಬೀಸುವ, ಸೋಬಾನೆ ಪದ, ಲಾಲಿ ಹಾಡುಗಳ ಮೂಲಕ ನೆರೆದಿದ್ದ ಸಾವಿರಾರ
ವರದಿ. ಸಾಯಬಣ್ಣ ಮಾದರ