Ad imageAd image

ಪ್ರೊ, ರಾಜು ಆಲಗುರ ವಿಜಯಪುರ ಜಿಲ್ಲೆಯ ಅಭಿವೃದ್ಧಿ ಗೋಸ್ಕರ ಶ್ರಮಿಸುವ ನಾಯಕ

Bharath Vaibhav
WhatsApp Group Join Now
Telegram Group Join Now

ಚಡಚಣ:-ವಿಜಾಪುರ ಲೋಕಸಭಾ ಚುನಾವಣೆಯ ಹತ್ತಿರ ಸಮೀಪ ಸುತ್ತಿದ್ದು ಎಲ್ಲ ಮತದಾನ ಬಂಧುಗಳು ಜಾಗೃತರಾಗಬೇಕು ನೀವು ಹಾಕುವ ಮತದಾನ ಜಿಲ್ಲೆಯ ಅಭಿವೃದ್ಧಿಗೋಸ್ಕರ ಇವತ್ತಿನ ತನಕ ಮೂರು ಬಾರಿ ಲೋಕಸಭಾ ಚುನಾವಣೆ ಆರಿಸಿ ಬಂದರು ರಮೇಶ ಜಿಗಜೆಣಿಯವರ ಕೆಲಸ ಶುನ್ಯವಾಗಿದೆ

ವಿಜಯಪುರ ನಗರವನ್ನು ಸಂಪರ್ಕಿಸುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಿಗೆ ಎಲ್ಲ ಕಡೆ ರೈಲ್ವೆ ಮೆಲ್ಸೇತುವೆ ಹಾಗೂ ರಸ್ತೆ ಮೆಲ್ಸೇತುವೆ ನಿರ್ಮಿಸುವುದು ಮತ್ತು ಹೆದ್ದಾರಿಗಳಿಗೆ ಹೆಚ್ಚಿನ ಅನುದಾನ ಒದಗಿಸಿ, ದುರಸ್ಥಿಗೊಳಿಸಿ, ಸುಧಾರಣೆಗೊಳಿಸುವುದು ಎಂದು ಎಂಬಿ ಪಾಟೀಲ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರು ಮಾತನಾಡಿದರು .

ಐತಿಹಾಸಿಕ ವಿಜಯಪುರ ಜಿಲ್ಲೆ ಅತೀ ಹೆಚ್ಚು ಸ್ಮಾರಗಳ ನಗರವಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಆದರೆ, ಜಿಲ್ಲೆಗೆ ಆರ್ಥಿಕ ಚೈತನ್ಯ ಒದಗುತ್ತದೆ. ಆದ್ದರಿಂದ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಜಯಪುರ ನಗರವನ್ನು ಸೇರ್ಪಡೆಗೊಳಿಸುವುದು.

ಕಳೆದ ಮೂರು ಅವಧಿಗಳು, 15 ವರ್ಷಗಳಿಂದ ಸಂಸದರಾಗಿರುವವರು ಜಿಲ್ಲೆಗೆ ಅನುಕೂಲಕರವಾಗುವ ಒಂದೇ-ಒಂದು ವಿಷಯವನ್ನು ಸಂಸತ್‍ನಲ್ಲಿ ಪ್ರಸ್ತಾಪಿಸಿರುವುದಿಲ್ಲ. ರೈತರು ಸಂಕಷ್ಟದಲ್ಲಿದ್ದಾಗ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಪ್ರಜ್ಞಾವಂತ ಮತದಾರರು ತಮ್ಮ ಮತ ಚಲಾಯಿಸುವಾಗ ಮೇಲಿನ ವಿಷಯವನ್ನು ಗಮನಿಸಿ, ವಿಜಯಪುರ ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ಸಂಸತ್ ಸದಸ್ಯತ್ವ ಬದಲಾವಣೆ ಆಗಲೇಬೇಕು ಎಂದು ಮತ ಹಾಕಬೇಕು.

ಆದ್ದರಿಂದ ನನಗೆ ಮತ ನೀಡಿ, ಆಯ್ಕೆ ಮಾಡಿದರೆ ಪ್ರಾಮಾಣಿಕವಾಗಿ ಈ ಪ್ರಸ್ತಾಪಿಸಿದ ಎಲ್ಲ ವಿಚಾರಗಳನ್ನು ಕಾಯಾ, ವಾಚಾ, ಮನಸಾ ಅನುಷ್ಠಾನಗೊಳಿಸಲು ನಾನು ಹೆಜ್ಜೆ ಇಡುತ್ತೇನೆ ಎಂದು ಅವರು ತಮ್ಮ ಅಭಿಪ್ರಾಯ ವನ್ನು ರಾಜು ಆಲಾಗುರ ಮಾತನಾಡಿದರು .

ಈ ಸಂದರ್ಭದಲ್ಲಿ ಎಂ,ಬಿ, ಪಾಟೀಲ ಸಚಿವರು, ವಿಠ್ಠಲ ಕಟಕದೊಂಡ ನಾಗಠಾಣಮತ ಕ್ಷೇತ್ರದ ಶಾಸಕರು, ರವಿ ಗೌಡ ಪಾಟೀಲ, ಆರ್ ಡಿ ಹಕ್ಕಿ, ಡಿಎಲ್ ಚೌಹಾನ, ಮಹಾದೇವ ಹಿರೇಕುರುಬರ, ಮುತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು

ವರದಿ ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
Share This Article
error: Content is protected !!