ಸೇಡಂ:- ತಾಲ್ಲೂಕಿನ ಮೆದಕ್ ತಾಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ನಾಗರಾಜ್ ಅವರು ತನ್ನ ಮನಬಂದಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಾಂಡದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ ಶಿಕ್ಷಕರಾದ ನಾಗರಾಜ್ ಅವರು ಪ್ರತಿ ವಾರಕ್ಕೆ ಒಂದು ಬಾರಿ ಊರಿಗೆ ಹೋಗುವುದು ಇವರ ಸಹಜ ಗುಣ ಆಗಿದೆ. ಅದರ ಹಿಂದೆ ಕಳ್ಳತನದ ದೊಡ್ಡ ಕಥೆಯಿದೆ ಎಂದು ಕೂಡ ಜನರು ಸಾಬೀತು ಪಡಿಸಿದ್ದಾರೆ.
ಶಾಲೆಯ ಬ್ಯಾಗ್ ಒಂದರಲ್ಲಿ ಎಣ್ಣೆ, ಅಕ್ಕಿ, ಬೆಲ್ಲ, ತೊಗರಿ ಬ್ಯಾಳಿ, ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿರುವುದು ಗ್ರಾಮಸ್ಥರು ಗಮಸಿದ್ದಾರೆ ಎಂದು ತಿಳಿದಿದೆ.
ಅಷ್ಟೇ ಅಲ್ಲದೆ ಶಾಲಯೆ ಎಸ್,ಡಿ,ಎಂ,ಸಿ ಅಧ್ಯಕ್ಷರು ಅನಕ್ಷರಸ್ಥರು ಆಗಿರುವುದರಿಂದ ತನ್ನ ಸಹಿ ಮಾಡಿಸಿಕೊಂಡು ಬ್ಯಾಂಕ್ ನಿಂದಾ ಶಾಲೆಯ ಹೆಸರಲ್ಲಿ ಅನೇಕ ರೀತಿಯ ಹಣವನ್ನು ತಂದು ದುರುಪಯೋಗ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಇದನ್ನು ಅಧಿಕಾರಿಗಳು ಗಮನಕ್ಕೆ ತಗೊಂಡು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.