ಮಲ್ಲಮ್ಮನ ಬೆಳವಡಿ : ಕರ್ನಾಟಕ ರಾಜ್ಯ ಸರ್ಕಾರ ಗೃಹ ಇಲಾಖೆಯಿಂದ ನೂತನವಾಗಿ ಜಾರಿ ತಂದಿರುವ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮವನ್ನು,ಇಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಪೊಲೀಸ್ ಠಾಣೆ ವತಿಯಿಂದ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ಉಡಿಕೇರಿ ಗ್ರಾಮದ ಅನೇಕ ಮನೆಗಳಿಗೆ ತೆರಳಿ ದೊಡವಾಡ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ವಿಶೇಷ ಧೈರ್ಯ ತುಂಬಿದರು, ಈ ಸಂದರ್ಭದಲ್ಲಿ ದೊಡವಾಡ ಪೊಲೀಸ್ ಠಾಣೆಯ PSI, G.G,ಹಂಪನ್ನವರ ಅವರು ಮಾತನಾಡಿ ,ಗಂಡ ಹೆಂಡತಿ ಜಗಳ, ಹಾಗೂ ಇನ್ನಿತರ ಸಾರ್ವಜನಿಕ ಕ್ಷೇತ್ರಕ್ಕೆ ತೊಂದರೆ ಉಂಟು ಮಾಡುವ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ಸಹಾಯವಾಣಿ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಹಾಗೂ ಗುರುತು ಪರಿಚಯ ಇಲ್ಲದ ಅಪರಿಚಿತ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಾಗ ಧೈರ್ಯದಿಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು, ಹಾಗೂ ದೊಡವಾಡ ಪೂಲೀಸ್ ಠಾಣೆಯ ESI, ಹನುಮಂತ ಬಂಡಿವಡ್ಡರ ಅವರು ಮಾತನಾಡಿ ,ಮನೆ ಮನೆಗೆ ಪೊಲೀಸ್ ಎಂದರೆ ನಾವು ನಿಮ್ಮ ಅನ್ನ ತಮ್ಮಂದಿರು ಇದ್ದಹಾಗೆ, ಜನಸ್ನೇಹಿ ಪೊಲೀಸರ ಬಗ್ಗೆ ಯಾರು ಕೆಟ್ಟ ಅಭಿಪ್ರಾಯ ತಿಳಿದುಕೊಳ್ಳಬಾರದು, ಮತ್ತು ಗುರುತು ಪರಿಚಯ ಇಲ್ಲದ ಅನಾಮಿಕ ವ್ಯಕ್ತಿಗಳು ಪೋನ್ ಮಾಡಿ OTP ನಂಬರ್ ಹಾಗೂ ATM ನಂಬರ್ ಕೇಳಿದಾಗ ಯಾರು ಸಹಿತ OTP ಹಾಗೂ ATM ನಂಬರ್ ಗಳನ್ನು ಹೇಳಬಾರದು ಒಂದು ವೇಳೆ ಹೇಳಿದರೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣ ಎಲ್ಲಾ ಮಂಗಮಾಯವಾಗುತ್ತೆ ಎಂದು ಹೇಳಿದರು.
ಹಾಗೂ ಮನೆ ಮನೆಗೆ ಭೇಟಿ ವಿನೂತನ ಕಾರ್ಯಕ್ರಮದಲ್ಲಿ ದೊಡವಾಡ ಪೂಲೀಸ್ ಠಾಣೆಯ ಮತ್ತಿಬ್ಬರು ESI,D H ಕೆಳಗೇರಿ ಹಾಗೂ M S ಮಾವೋರಕರ್ ಹಾಗೂ ದೊಡವಾಡ ಪೊಲೀಸ್ ಠಾಣೆಯ ಸಿಬ್ಬಂದಿ M S ಮುರಗೋಡ ಅವರು ಹಾಗೂ P S R ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಭ್ರಷ್ಟಾಚಾರ ನಿಗ್ರಹದಳ ವಿಭಾಗದ ಸವದತ್ತಿ ತಾಲೂಕು ಅಧ್ಯಕ್ಷರಾದ ಮುಸ್ತಾಕ ಹತ್ತಿಕಟಗಿ ಅವರು ಮಾತನಾಡಿ,ಪೂಲೀಸ್ ಎಂದರೆ ಬಯಾ ಅಲ್ಲ ಗೌರವ. ಏನೇ ಸಮಸ್ಯೆಗಳು ಇದ್ದರೂ ಪೊಲೀಸರ ಮುಂದೆ ಧೈರ್ಯದಿಂದ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಎಂದು ಹೇಳಿದರು.
ಹಾಗೂ ಈ ಕಾರ್ಯಕ್ರಮದಲ್ಲಿ ಉಡಿಕೇರಿ ಗ್ರಾಮದ ಗ್ರಾಮಸ್ಥರು, ಹಿರಿಯರು, ಯುವಕರು, ಹಾಗೂ ಗ್ರಾಮದ ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು.
ವರದಿ : ದುಂಡಪ್ಪ ಹೂಲಿ




