ನವದೆಹಲಿ: ಇಂಗ್ಲೆಂಡ್ ವಿರುದ್ಧ ಓವೆಲ್ ಟೆಸ್ಟ್ ನಲ್ಲಿ ಜಯಗಳಿಸಿ ಸರಣಿಯನ್ನು 2-2 ರಿಂದ ಸಮ ಮಾಡಿಕೊಂಡ ನಂತರ ಭಾರತ ಟೆಸ್ಟ್ ಕ್ರಿಕೆಟ್ ರೇಟಿಂಗ್ ಪ್ರಗತಿ ಕಂಡಿದೆ.

ಇಂಗ್ಲೆಂಡ್ ವಿರುದ್ಧದ ಕಡೆಯ ಟೆಸ್ಟ್ ಪಂದ್ಯಕ್ಕೆ ಮುನ್ನ 4 ನೇ ಸ್ಥಾನದಲ್ಲಿದ್ದ ಭಾರತ ಟೆಸ್ಟ್ ರ್ಯಾಂಕಿಂಗ್ ಇದೀಗ ಮೂರನೇ ಸ್ಥಾನಕ್ಕೆ ಪ್ರಗತಿ ಕಂಡಿದೆ. ಮೂರನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ಒಂದು ಗೆಲುವು ಹಾಗೂ ಒಂದು ಪಂದ್ಯದ ಡ್ರಾ ದಿಂದ ಶ್ರೀಲಂಕಾ ದ್ವಿತೀಯ ಸ್ಥಾನದಲ್ಲಿದೆ.




