ಹುಕ್ಕೇರಿ : ದಿನಾಂಕ 19-10-2024 ರಂದು ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಹೊಳಿಯವರು ಹುಕ್ಕೇರಿ ಹೊರವಲಯದ ಕ್ಯಾರಗುಡ್ಡ ಮಠದಲ್ಲಿ ಹುಕ್ಕೇರಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡು ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ತುರ್ತಾಗಿ ಕೈಗೆತ್ತಿಕೊಳ್ಳಬೇಕಿರುವ ವಿವಿಧ ಕಾಮಗಾರಿಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ಅಗತ್ಯ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು
ಈ ಸಂದರ್ಭದಲ್ಲಿ ತಹಶಿಲ್ದಾರ ಶ್ರೀಮತಿ ಮಂಜಳಾ ನಾಯಕ, ಹುಕ್ಕೇರಿ ಪುರಸಭೆಯ ಉಪಾಧ್ಯಕ್ಷ ಶ್ರೀ ಇಮ್ರಾನ್ ಮೊಮಿನ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೆಶಗೋಳ




