ಗುರುಮಿಠಕಲ್ : ರಾಜ್ಯದಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಕಾಂಗ್ರೆಸ್ ಸರಕಾರ ತ್ವರಿತ ವಾಗಿ ನಿರ್ಧಾರ ಕೈಗೊಳ್ಳಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಅವರ ನಿವಾಸಕ್ಕೆ ಎಂ ಆರ್ ಪಿ ಎಸ್ ರಾಜ್ಯ ಅಧ್ಯಕ್ಷ ನರಸಪ್ಪ ಬಿ. ದಂಡೋರ ಹಾಗು ಎಂ ಆರ್ ಪಿ ಎಸ್ ಯಾದಗಿರಿ ಪದ ಧಿಕಾರಿಗಳ ನಿಯೋಗವು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿ ನೀಡಿ ಮನವಿ ನೀಡಿ ಚರ್ಚಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು 3 ದಶಕಗಳ ನಿರಂತರ ಬೇಡಿಕೆ, ಒತ್ತಾಯಗಳ ಹಿನ್ನಲೆ ಯಲ್ಲಿ ರಾಜ್ಯ ಸಚಿವ ಸಂಪುಟವು ಪರಿಶಿಷ್ಟ ಜಾತಿ ಗಳಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ.ಪರಿಶಿಷ್ಟ ಜಾತಿಗಳಲ್ಲಿ 101 ಒಳ ಪಂಗಡಿಗಳಿದ್ದು,ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕ ವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಸರಕಾರ ನಿರ್ಧಾರಿಸಲಾಗಿದೆ ಎಂದರು.
ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಧೀಶರ ಅಧ್ಯಕ್ಷತೆಯಲ್ಲಿ ಕಮಿಷನ್ ಆಫ್ ಇಂಕ್ವಾರಿ ಕಾಯ್ದೆ 1952ರ ಅನ್ವಯ ಆಯೋಗವನ್ನು ರಚಿಸಲು ನಿರ್ಧಾರಿಸಲಾಗಿದೆ.ಸದರಿ ಆಯೋಗ 3 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಷರತ್ತು ವಿಧಿಸಲು ಸಚಿವ ಸಂಪುಟ ತೀರ್ಮಾನಿಸಿದೆ.ವರದಿ ಬರುವರೆಗೆ ಮುಂದಿನ ಬ್ಯಾಕ್ ಲಾಗ್ ಉದ್ಯೋಗ ಮುಂತಾದವುಗಳ ನೇಮಕಾತಿ ಹೊರಡಿಸದಂತೆ ತಡೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಇದೆ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ನರಸಪ್ಪ ಬಿ ದಂಡೋರ ರಾಜ್ಯ ಉಪಧ್ಯಕ್ಷ. ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ ಎಂ ದೇವರಾಜ್ ಗಣೇಶ್ ದುಪ್ಪಲಿ ಬೆಂಗಳೂರು ಜಿಲ್ಲಾ ಅಧ್ಯಕ್ಷ ತ್ರಿಲೋಕ ಚಂದನ್ ಯಾದಗಿರಿ ಜಿಲ್ಲೆಯ ಜಿಲ್ಲಾ ಅಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೆರಾ ಗುರುಮಠಕಲ್ ತಾಲೂಕ ಅಧ್ಯಕ್ಷ ರವಿ ಬುರನೋಳ,ರುದ್ರಪ್ಪ ಶಿವನೂರ, ತಾಯಪ್ಪ ರಾಮಸಮುದ್ರ, ನಾಗರಾಜ ಅಚೋಲ್, ನಾಗಪ್ಪ,ರುದ್ರಪ್ಪ ಹನುಮಂತ,ಸಾಬುರೆಡ್ಡಿ,ಬಾಲು, ಪಕೀರಪ್ಪ,ನರಸಪ್ಪ,ಮಲ್ಲಪ್ಪ, ಬನ್ನಪ್ಪ,ಭ ದ್ರಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳಿಂದ ಒಳ ಮೀಸಲಾತಿ ಕಲ್ಪಿಸುವ ಭರವಸೆ!




