ಬೆಂಗಳೂರು: ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕು. ಆ ಮೂಲಕ ಕಾನೂನಿನ ಭಯ ಹುಟ್ಟಿಸಿ ಅಪರಾಧ ಕೃತ್ಯಗಳನ್ನು ಹುಟ್ಟಡಗಿಸಬೇಕು ಎಂಬುದು ಇಂದು ನೆನ್ನೆಯ ಡಿಮ್ಯಾಂಡ್ ಅಲ್ಲ. ಆದ್ರೆ ಇದಕ್ಕಾಗಿ ಸರಿಯಾದ ಕಾನೂನಿನ ಅಗತ್ಯವಿದೆ. ಈ ಕಾನೂನಿನ ಹುಡುಕಾಟದಲ್ಲಿದ್ದ ಸರ್ಕಾರದ ಮುಂದೆ ಈಗ ಅತ್ಯಾಚಾರಿಗಳಿಗೆ ಆಸ್ತಿಯಲ್ಲಿ ಹಕ್ಕಿಲ್ಲ ಎಂಬ ಪ್ರಸ್ತಾವನೆ ಇದೆ.
ಈ ಬಗ್ಗೆ ತಜ್ಞರ ಸಮಿತಿ ಈಗಾಗಲೇ ಶಿಫಾರಸ್ಸು ಮಾಡಿದ್ದು, ಈ ಪ್ರಸ್ತಾವನೆಯ ಬಗ್ಗೆ ಪರಾಮರ್ಶೆ ಮಾಡಲು ಸರ್ಕಾರ ಮುಖ್ಯಕಾರ್ಯದರ್ಶಿಯವರಿಗೆ ಸೂಚನೆ ನೀಡಿದೆ.ಈ ಸಮಿತಿ ನೀಡಿರುವ ವರದಿಯಲ್ಲಿ ರೇಪಿಸ್ಟ್‌ಗಳಿಗೆ ಆಸ್ತಿ ಹಕ್ಕು ಹಿಂಪಡೆಯುವ ಪ್ರಸ್ತಾಪ ಮಾಡಿದೆ.
ಈ ಕಠಿಣ ಕಾನೂನು ಅಷ್ಟಕ್ಕೆ ಮಾತ್ರ ಸೀಮಿತವಾಗದೆ,ಈ ರೀತಿಯ ಅಪರಾಧಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಹಿಂಪಡೆಯುವ ಬಗ್ಗೆ ಕ್ರಮಗಳಾಗಬೇಕೆಂದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರೇಷನ್ ಕಾರ್ಡ್, ಸ್ಕಾಲರ್‌ಶಿಪ್ ಸೇರಿ ಯಾವುದೇ ಸೌಲಭ್ಯ ಸಿಗದ ತೀರ್ಮಾನ ಆಗಬೇಕೆಂದು ಒತ್ತಾಯಿಸಲಾಗಿದೆ.
ಕಳೆದ 10 ವರ್ಷಗಳ ಹಿಂದೆ 2014ರಲ್ಲಿ ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನಲೆ ಅಂದಿನ ಸರ್ಕಾರ ಎಂ.ಸಿ.ನಾಣಯ್ಯ ನೇತೃತ್ವದ ಸಮಿತಿ ರಚಿಸಿತ್ತು. ಈ ಸಮಿತಿಯ ಶಿಫಾರಸ್ಸು ಈಗ ಸರ್ಕಾರದ ಮುಂದಿದ್ದು ಇದನ್ನು ಜಾರಿ ಮಾಡುವ ಬಗ್ಗೆ ಪರಾಮರ್ಶೆ ನಡೆಸಿ ವರದಿ ಕೊಡಲು ಸರ್ಕಾರ ಮುಖ್ಯಕಾರ್ಯದರ್ಶಿಯವರಿಗೆ ಸೂಚಿಸಿದೆ.