Ad imageAd image

ಅಕ್ಕಾ ಪಡೆಯಿಂದ ಮಹಿಳೆಯರ ರಕ್ಷಣೆ

Bharath Vaibhav
ಅಕ್ಕಾ ಪಡೆಯಿಂದ ಮಹಿಳೆಯರ ರಕ್ಷಣೆ
WhatsApp Group Join Now
Telegram Group Join Now

ಹುಮನಾಬಾದ : ಮಕ್ಕಳ,ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವ ಪ್ರಮುಖ ಉದ್ದೇಶದಿಂದ ಅಕ್ಕಾ ಪಡೆ ರಚಿಸಲಾಗಿದೆ ಎಂದು ಡಿವೈಎಸ್ಪಿ ಜೆ.ಎಸ್ ನ್ಯಾಮಗೌಡ ಹೇಳಿದರು.ಹುಮನಾಬಾದ ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಅಕ್ಕಾ ಪಡೆ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರು ಸೇರಿದಂತೆ ಯುವತಿಯರ,ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಅಕ್ಕಾ ಪಡೆ ಕಾರ್ಯನಿರ್ವಹಿಸುತ್ತಿದೆ.ಪಟ್ಟಣದ ಮುಖ್ಯ ರಸ್ತೆಯಲ್ಲಿ,ಜನ ದಟ್ಟನೆಯ ಪ್ರದೇಶಗಳಲ್ಲಿ ತಿರುಗಾಡುತ್ತಿರುವ ಮಹಿಳೆಯರಿಗೆ ಪುಂಡ ಪೋಕರಿ ಹುಡುಗರು ಚುಡಾಯಿಸಿ ಮಾನಸಿಕ ಕಿರುಕುಳ ನೀಡುವ ವ್ಯಕ್ತಿಗಳನ್ನ ಪತ್ತೆ ಹಚ್ಚಿ ತಕ್ಕ ಶಿಕ್ಷೆ ನೀಡಲಾಗುತ್ತದೆ.

ಮಹಿಳೆ ಮತ್ತು ಮಕ್ಕಳ ದೌರ್ಜನ್ಯ ಕಾಯ್ದೆಗಳಿಗೆ ಸಂಬಂಧಿಸಿದಂತೆ ‘ಅಕ್ಕಾ ಪಡೆ’ ವಿವಿಧ ಪ್ರದೇಶಗಳಲ್ಲಿರುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತದೆ.ಯಾರಾದರೂ ಯಾವುದೇ ಸಮಸ್ಯೆಯಲ್ಲಿ ಸಿಲುಕಿದಾಗ 112 ಕರೆ ಮಾಡಬೇಕು.ಅಕ್ಕಾ ಪಡೆಯವರು ಎಲ್ಲ ಸ್ಥಳಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ.ಯಾರು ಆತಂಕ ಪಡುವ ಅಗತ್ಯವಿಲ್ಲ.ಅಕ್ಕಾ ಪಡೆಗೆ ಮಾಹಿತಿ ನೀಡಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಗುರು ಪಾಟೀಲ,ಪಿಎಸ್ಐ ಸುರೇಶ ಚೌಹಾಣ,ಹುಲಿಯಪ್ಪ ಸೇರಿ ಅಕ್ಕಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ : ಸಜೀಶ ಲಂಬುನೋರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!