Ad imageAd image

ಮಳೆಯ ನೀರು ಮನೆಯೊಳಗೆ,ರಸ್ತೆ ತಡೆದು ಪ್ರತಿಭಟನೆ

Bharath Vaibhav
ಮಳೆಯ ನೀರು ಮನೆಯೊಳಗೆ,ರಸ್ತೆ ತಡೆದು ಪ್ರತಿಭಟನೆ
WhatsApp Group Join Now
Telegram Group Join Now

ಗೋಕಾಕ : ತಾಲೂಕಾದ್ಯಾಂತ ಮಳೆಯ ಅವಾಂತರದಿಂದ ಮಳೆಯ ನೀರು ಹರಿದು ಮನೆಗಳಿಗೆ ನುಗ್ಗಿದ ಪ್ರಮಾಣ ಮನೆಯಲ್ಲಿದ್ದ ದವಸ,ದಾನ್ಯ,ಮಕ್ಕಳ ಓದುವ ಪುಸ್ತಕ, ಪ್ರೀಜ್ ಸೇರಿದಂತೆ ಅಪಾರ ಪ್ರಮಾಣ ಹಾನಿಯಾದ ಘಟನೆ ತಾಲೂಕಿನ ಕೊಣ್ಣೂರ ಪುರಸಭೆಯ ವ್ಯಾಪ್ತಿಯ ಮಾನಿಕವಾಡಿಯಲ್ಲಿ ನಡೆದಿದೆ.

ಮಾನಿಕವಾಡಿಯಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿದ್ದ ಕಾರಣ . ರಸ್ತೆ ಎತ್ತರವಾಗಿದ್ದು ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯ ನೀರು ಹರಿದು ಹೊಗದ ಕಾರಣ ಮಳೆಯ ನೀರು ನಿಂತಲ್ಲೆ ನಿಂತು ಎಲ್ಲಿಯೂ ದಾರಿಯಿಲ್ಲದ ಕಾರಣ ಮಳೆಯ ನೀರು ಮನೆಯೊಳಗೆ ನುಗ್ಗಿ ಅಪಾರ ಹಾನಿಯಾಗಿ ಹಲವಾರು ಕುಟುಂಬ ನಷ್ಟ ಅನುಭವಿಸುವಂತಾಗಿದೆ.

ಇಷ್ಟೆಲ್ಲಾ ಆದರೂ ಸಹ ಯಾವುದೆ ಅಧಿಕಾರಿಗಳು ಸ್ಥಳಕ್ಕೆ ಬಂದು ವಿಚಾರಿಸದ ಕಾರಣ ರೊಚ್ಚಿಗೆದ್ದ ಹನಿಗೊಳಗಾದ ಕುಟುಂಬಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಿ ನೀರು ಹೊಗಲು ವ್ಯವಸ್ಥೆ ಮಾಡಬೇಕು, ಹಾನಿಗೊಳಗಾದ ಕುಟುಂಬಸ್ಥರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.

ಇನ್ನು ಪ್ರತಿಭಟನಾ ಸ್ಥಳಕ್ಕೆ ಗೋಕಾಕ ಸಿಪಿಆಯ್ ಸುರೇಶಬಾಬು ಆಗಮಿಸಿ ಪ್ರತಿಬಟನಾಕಾರರ ಮನವೊಲಿಸಲು ಪ್ರಯತ್ನ ಪಟ್ಟರು ಸಹ ಪ್ರತಿಭಟನೆಕಾರರು ಕ್ಯಾರೆ ಅನ್ನಲಿಲ್ಲ.

ಇದೆ ಸಮಯದಲ್ಲಿ ಕೊಣ್ಣೂರ ಪುರಸಭೆ ಕಿರಿಯ ಅಭಿಯಂತರೊಂದಿಗೆ ಪ್ರತಿಭಟನಾಕಾರರ ನಡುವೆ ಕೆಲವು ಕಾಲ ಮಾತಿನ ಚಕಮಕಿ ನಡೆಯಿತು. ತಕ್ಷಣ ನಮಗೆ ಎಲ್ಲ ರೀತಿಯ ಸೌಲಬ್ಯ ಒದಗಿಸಬೇಕೆಂದು ಒತ್ತಾಯಿಸಿದರು,

ಸ್ಥಳಕ್ಕೆ ಲೋಕೊಪಯೋಗಿ ಇಲಾಖೆಯ ಅಧಿಕಾರಿ,ಪೋಲಿಸ್ ಇಲಾಖೆಯವರು, ಪುರಸಭೆಯವರು ತಕ್ಷಣವೆ ಸೂಕ್ತ ಪರಿಹಾರ ನೀಡಿ ನೀರು ಹೊಗಲು ವ್ಯವಸ್ಥೆ ಮಾಡುತ್ತೇವೆಂದು ಭರವಸೆ ನೀಡಿದರು.

ವರದಿ : ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!