ಮುದಗಲ್ಲ : ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಕರಜಗಿ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ತೆಹ್ರಿಕ-ಇ-ಟಿಪ್ಪು ಸುಲ್ತಾನ್ ಸಂಘಟನೆ ವತಿಯಿಂದ ಮೇಣದ ಬತ್ತಿಯ ಮೆರವಣಿಗೆ ಮಾಡಲಾಯಿತು ಪೊಲೀಸ್ ಠಾಣೆಯ ಮುಂಭಾಗದಲ್ಲಿ ದಲ್ಲಿ ಅಂಬೇಡ್ಕರ್ ವೃತ್ತಿಯಲ್ಲಿ ಮೇಣದ ಬತ್ತಿ ಹಚ್ಚಿ ನಾಲ್ಕು ವರ್ಷದ ಬಾಲಕಿ ಮಿಸ್ಬಾಗೆ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅತ್ಯಾಚಾರಿಯನ್ನು ಗಲ್ಲು ಶಿಕ್ಷೆ ವಿಧಿಸಿ ನಮಗೆ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಯಿತು.

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಕರಜಗಿ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು 50 ವರ್ಷದ ಪಾಂಡುರಂಗ ಕಳ್ಳಿ ಎಂಬವನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪ ಹಿನ್ನಲೆ, ಇಂತಹ ಕಾಮುಕರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ತೆಹ್ರಿಕ-ಇ-ಟಿಪ್ಪು ಸುಲ್ತಾನ್ ಮುದಗಲ್ಲ ಘಟಕ ದ ಅಧ್ಯಕ್ಷ ರಾದ ಮೈಬುಬೂ ಸಾಬ (ಬೂಲೆಟ್) ಅವರು ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿ ವಿರುದ್ಧ ಘೋಷಣೆ ಕೂಗಿ, ಬಾಲಕಿ ಕುಟುಂಬದವರಿಗೆ 50 ಲಕ್ಷ ಪರಿಹಾರ ನೀಡಬೇಕು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹೇಳಿದರು
ಈ ಸಂದರ್ಭದಲ್ಲಿ :ತೆಹ್ರಿಕ-ಇ-ಟಿಪ್ಪು ಸುಲ್ತಾನ್ ಉಪಾಧ್ಯಕ್ಷ ರಾದ ಖಾಸಿಂ ಬುಡಾ, ಕಾಯ೯ಕಶೀ೯ ಮಕುದಮ್ಮ ಬೆಳ್ಳಿಕಟ್, ತಾಲೂಕು ಅಧ್ಯಕ್ಷ ಮುಹಮ್ಮದ್ ಅಬ್ದುಲ್ ಜಂಗ್ಲಿ, ಸಮೀರ್,ಎಂ,ಡಿ ,ರಫಿ ಖಾಜಿ,
ಪಾಶ ಕಡ್ಡಿಪುಡಿ, ಡಾ!! ಮಹಮ್ಮದ್ ರಫಿ, ರಹೀಮ್ ಶಾ , ಉಪಸ್ಥಿತರಿದ್ದರು
ವರದಿ: ಮಂಜುನಾಥ ಕುಂಬಾರ




