Ad imageAd image

ಹೊರಗುತ್ತಿಗೆ ನೇಮಕಾತಿ:1,6ನೇ ಷರತ್ತು ರದ್ದುಪಡಿಸಿ ,ಸರ್ಕಾರದ ವಿರುದ್ಧ ಪ್ರತಿಭಟನೆ

Bharath Vaibhav
ಹೊರಗುತ್ತಿಗೆ ನೇಮಕಾತಿ:1,6ನೇ ಷರತ್ತು ರದ್ದುಪಡಿಸಿ ,ಸರ್ಕಾರದ ವಿರುದ್ಧ ಪ್ರತಿಭಟನೆ
WhatsApp Group Join Now
Telegram Group Join Now

ಚಾಮರಾಜನಗರ:-ಹೊರ ಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.ನಗರದ ಜಿಲ್ಲಾಡಳಿತ ಭವನದ ಮುಂಭಾಗ ಇರುವ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಪುತ್ಥಳಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಈ ವೇಳೆ ದಸಂಸ ಜಿಲ್ಲಾದ್ಯಕ್ಷ ಯರಿಯೂರು ರಾಜಣ್ಣ ಮಾತನಾಡಿ, ಸರಕಾರವು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ನಿಯಮಗಳನ್ನು ಜಾರಿಗೆ ತರಲು ಆದೇಶ ನೀಡಿರುವುದನ್ನು ದಲಿತ ಸಂಘರ್ಷ ಸಮಿತಿಯು ಸ್ವಾಗತಿಸುತ್ತದೆ. ಆದರೆ, ಸರಕಾರದ ಸುತ್ತೋಲೆಯ 1 ಮತ್ತು 6 ನೇ ಷರತ್ತುಗಳು ಸರಕಾರದ ಸದುದ್ದೇಶದ ಹೊರಗುತ್ತಿಗೆಯಲ್ಲಿನ ಮೀಸಲಾತಿ ನೀತಿಗೆ ವಿರುದ್ಧವಾಗಿದೆ. 1 ಮತ್ತು 6 ನೇ ಶರತ್ತನ್ನು ಮಾರ್ಪಾಡುಗೊಳಿಸಿ ಉದ್ಯೋಗಗಳನ್ನು ಸಂಖ್ಯೆ ಎಷ್ಟೇ ಇರಲಿ ಮತ್ತು ಎಷ್ಟೇ ಅವಧಿಯದ್ದಾಗಿರಲಿ ಅಲ್ಲಿ “ರೋಸ್ಟರ್ ನಿಯಮ”ಗಳ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇರಲೇಬೇಕು ಎಂದು ಆಗ್ರಹಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!