ಮೊಳಕಾಲ್ಮುರು:ಶಾಸಕರು ವಿಧಾನ ಪರಿಷತ್ ಸದಸ್ಯರು ಮಾಜಿ ಶಾಸಕರು ಮಂತ್ರಿಗಳು ಸೇರಿದಂತೆ ಸಾರಿಗೆ ವಿಮಾನ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ.
ಮೊಳಕಾಲ್ಮೂರು:-ಸದನದಲ್ಲಿ ಯಾವುದೇ ಚರ್ಚೆ ಇಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪರ ವಿರೋಧವಿಲ್ಲದೆ ಶಾಸಕರು ವಿಧಾನ ಪರಿಷತ್ ಸದಸ್ಯರು ಮಾಜಿ ಶಾಸಕರು ಮಂತ್ರಿಗಳು ಸೇರಿದಂತೆ ಎಲ್ಲರಿಗೂ ಸಂಬಳ ಸಾರಿಗೆ ವಿಮಾನ ವೈದ್ಯಕೀಯ ಅನೇಕ ಸೌಲಭ್ಯಗಳನ್ನು ಡಬಲ್ ಮಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಸೌಧದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ಮಾಡಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಯಾವುದೇ ಕಾರಣಕ್ಕೂ ರಾಜ್ಯಪಾಲರು ಅನುಮೋದನೆಗೆ ಹೋಗಿರುವ ಕಾಯ್ದೆಯನ್ನು ಅಂಕಿತ ಹಾಕದೆ ವಾಪಸ್ಸು ಕಳಿಸಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುತ್ತೇವೆ ಎಂದರು ರಾಜ್ಯದಲ್ಲಿ ಜನಸಾಮಾನ್ಯರ ಮೇಲೆ ಸ್ಟ್ಯಾಂಪ್ ಸರ್ವೆ ಭೂ ದಾಖಲೆ ರಿಜಿಸ್ಟ್ರೇಷನ್ ಕಂದಾಯ ಪಹಣಿ ಬಸ್ಸಿನ ದರ ಹಾಲಿನ ದರ ವಿದ್ಯುತ್ ದರ ನೀರಿನ ದರ ಮುಂತಾದ ವಸ್ತುಗಳ ಮೇಲೆ ನಾಲ್ಕು ಪಟ್ಟು ತೆರಿಗೆ ಹಾಕಿ ಆ ಹಣದಲ್ಲಿ ಮೋಜು ಮಾಡುತ್ತಿರುವ ಸರ್ಕಾರವನ್ನು ವಜಾ ಮಾಡಬೇಕು ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಸಮಸ್ಯೆಗಳು ಚರ್ಚೆ ಮತ್ತು ಸಾರ್ವಜನಿಕರ ಅಗತ್ಯ ಸೌಲಭ್ಯಕ್ಕೆ ಚರ್ಚೆ ಮಾಡಲು ಸದನದಲ್ಲಿ 20 ರಿಂದ 30 ಜನ ಶಾಸಕರು ಇರುತ್ತಾರೆ ಉಳಿದ ಶಾಸಕರು ಸಭೆಗೆ ಗೈರು ಹಾಜರಾಗಿ ಅವರ ಸ್ವಂತ ಸಮಾರಂಭಗಳಲ್ಲಿ ಭಾಗವಹಿಸಿರುತ್ತಾರೆ ವಿಧಾನ ಪರಿಷತ್ತಿಗೆ ಶಾಸಕರು ಹವಾಮಾನ ಮಾಡುತ್ತಿದ್ದು, ಇಂಥವರಿಗೆ ಸಂಬಳ ಸಾರಿಗೆ ಹೆಚ್ಚು ಮಾಡಿಕೊಳ್ಳುವ ನೈತಿಕತೆ ಎಲ್ಲಿಂದ ಬಂತು, ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿದ್ದು ಶಾಸಕರು ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ ಆದ್ದರಿಂದ ಸರ್ಕಾರವನ್ನು ವಜ ಮಾಡಬೇಕು ಎಂದು ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಹಣ ಒದಗಿಸಲ್ಲ, ಅದೇ ರೀತಿ ನಿರ್ಗತಿಕರಿಗೆ ಕೊಡುತ್ತಿರುವ ಮಾಸಾಸನೆ ಕೊಟ್ಟಿಲ್ಲ, ರೈತರಿಗೆ ವಿದ್ಯುತ್ ಸರಬರಾಜಿಗೆ ಹಾಗೂ ಅಕ್ರಮ ಸಕ್ರಮಗಳನ್ನು ಯೋಜನೆಗಳನ್ನು ನಿಲ್ಲಿಸಿದ್ದಾರೆ. ಆದರೆ ಮೋಜು ಮಸ್ತಿ ಜೀವನಕ್ಕೆ ಸದನದಲ್ಲಿ ಚರ್ಚೆ ಇಲ್ಲದೆ ಎಲ್ಲಾ ಪಕ್ಷಗಳು ಪಕ್ಷ ಬೇಧ ಮರೆತು ಒಂದಾಗಿ ಸಂಬಳ ಸಾರಿಗೆ ಎರಡು ಪಟ್ಟು ಜಾಸ್ತಿ ಮಾಡಿಕೊಂಡು ಮತದಾರರಿಗೆ ನಾಡಿನ ಜನತೆಗೆ ದ್ರೋಹ ಬಗೆಯುತ್ತಿರುವ ಸದನವನ್ನು ವಜಾಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಪ್ರಧಾನ ಕಾರ್ಯದರ್ಶಿ ವೀರಣ್ಣ, ಗೌರವ ಅಧ್ಯಕ್ಷರಾದ ಗುಂಡ್ಲೂರು ತಿಮ್ಮಣ್ಣ, ಹಸಿರು ಸೇನೆ ಅಧ್ಯಕ್ಷರಾದ ಮಂಜುನಾಥ್ ಪ್ರಧಾನ ಕಾರ್ಯದರ್ಶಿಗಳಾದ ಹೋದೋಬನಟ್ಟಿ ಮಹೇಶ್ ಪಿಟಿಹಟ್ಟಿ ಈರಣ್ಣ, ಎಸ್ ಟಿ ಚಂದ್ರಣ್ಣ, ರವಿಕುಮಾರ್, ನಿಂಗಣ್ಣ ದೊಡ್ಡಸೂರ್ಯ ವಿಜಯ್ ಈಶ್ವರಪ್ಪ ಇನ್ನು ಹಲವರಿದ್ದರು.
ಪಿಎಂ ಗಂಗಾಧರ: ಮೊಳಕಾಲ್ಮೂರು