ಯಳಂದೂರು : ತಾಲ್ಲೋಕು ಆಸ್ಪತ್ರೆ ಮುಂಭಾಗ ತಾಲ್ಲೋಕು ಬಿಜೆಪಿ ಮಂಡಲದ ಅನಿಲ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲಕಾಲ ಪ್ರತಿಭಟನೆ ನೆಡೆಸಲಾಯಿತು.

ಅನಿಲ್ ರವರು ಮಾತನಾಡಿ ರಾಜ್ಯ ಸಿದ್ದರಾಮಯ್ಯ ರವರ ಸರ್ಕಾರ ಕೇಂದ್ರ ಸರ್ಕಾರ ಮಾಡಿರುವ ಜನರಿಗೆ ಕಡಿಮೆ ದರದಲ್ಲಿ ಸಿಗುವಾಗ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಕಾರ್ಯವನ್ನು ಮಾಡುತ್ತಿದೆ ಇದನ್ನು ಇಲ್ಲಿಗೆ ನಿಲ್ಲಿಸಬೇಕು ಜನೌಷಧಿ ಕೇಂದ್ರಗಳನ್ನು ಪುನಃ ತೆರೆಯಬೇಕು ತೆರೆಯುವ ವರೆಗೂ ಹೋರಾಟ ಮಾಡುತೇವೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ಮಾತನಾಡಿ ರಾಜ್ಯ ಸರ್ಕಾರ ಖಾಸಗಿ ಮೆಡಿಕಲ್ ಮಾಫಿಯಕೆ ಮಣಿದು ಜನರಿಗೆ ಕಡಿಮೆ ದರದಲ್ಲಿ ದೊರಕುವ ಜನೌಷಧಿ ಕೇಂದ್ರಗಳನ್ನು ಮುಚ್ಚುತಿದೆ ಎಂದರು.
ಜಿಲ್ಲಾ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ಮಾತನಾಡಿ ರಾಜ್ಯ ಸರ್ಕಾರ ಮಾಡುತ್ತಿರುವುದು ಸರಿಯಾದ ಕೆಲಸ ಅಲ್ಲಾ ಜನರ ಅತಿರ ಲೂಟಿ ಮಾಡುವ ಕೆಲಸವಾಗಿದೆ ಜನರಿಗೆ 10ರುಪಾಯಿಗೆ ಕೊಡುವ ಜನೌಷಧಿಗಳನ್ನು ಖಾಸಗಿ ಮೆಡಿಕಲ್ ಗೆ 100ಕೊಟ್ಟು ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣ ಮಾಡಲು ಹೊರಟಿದೆ ಇದಕೆ ಬಿಜೆಪಿ ಸರ್ಕಾರ ಖಂಡಿಸುತ್ತದೆ.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೋಕು ಮಂಡಲದ ಸದ್ಯಸರುಗಳು ಜಿಲ್ಲಾ ಸದ್ಯಸರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




