Ad imageAd image

ಎಸ್ಸಿ ಎಸ್ಟಿ ಅನುದಾನ ದುರ್ಬಳಕೆ ಖಂಡಿಸಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಪ್ರತಿಭಟನೆ..

Bharath Vaibhav
ಎಸ್ಸಿ ಎಸ್ಟಿ ಅನುದಾನ ದುರ್ಬಳಕೆ ಖಂಡಿಸಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಪ್ರತಿಭಟನೆ..
WhatsApp Group Join Now
Telegram Group Join Now

ಚಾಮರಾಜನಗರ :-ಯಳಂದೂರು.ರಾಜ್ಯ ಸರ್ಕಾರ ಎಸ್.ಸಿ/ಎಸ್.ಟಿ ಮೀಸಲು ಅನುದಾನ ವನ್ನು ಅನ್ಯ ಉದ್ದೇಶಗಳಿಗೆ ಬಳಸಿರುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ನಾಡ ಮೆಗಲಮ್ಮ ದೇವಸ್ಥಾನದಿಂದ ಮೆರವಣಿಗೆ ಹೊರಟು ತಹಸಿಲ್ದಾರ್ ಕಚೇರಿಗೆ ತೆರಳಿ ತಹಸಿಲ್ದಾರ್ ಜಯಪ್ರಕಾಶ್ ರವರ ಮುಖಂತರ ರಾಜ್ಯಪಾಲಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಬಿಎಸ್‌ಪಿ ರಾಜ್ಯ ಸಂಯೋಜಕರಾದ ಎಂ.ಕೃಷ್ಣಮೂರ್ತಿರವರು ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಎಂದು ಜಾರಿಗೆ ತಂದ ಎಸ್ಸಿ.ಎಸ್ಟಿ ಮತ್ತು ಟಿಎಸ್‌ಪಿ ಹಣವನ್ನು 2023-24 ಮತ್ತು 2024-25 ನೇ ಸಾಲಿನ 2 ವರ್ಷಗಳಲ್ಲಿ 25,000 ರೂ. ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಎಸ್.ಸಿ/ಎಸ್.ಟಿ ಗಳ ಕುತ್ತಿಗೆ ಕುಯ್ಯುವ ಕೆಲಸ ಮಾಡಿದ್ದಾರೆ.

ಈ ಯೋಜನೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿರುವುದೆಂದು ಆಸಭಾವನೆ ಉಂಟಾಗಿತ್ತು,ಆದರೆ ಕರ್ನಾಟಕ ರಾಜ್ಯವನ್ನಳಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಅಧಿನಿಯಮದ ಆಶಾಯವನ್ನು ಜಾರಿ ಮಾಡದೆ ಗಾಳಿಗೆ ತೂರಿರುವುದು ಬಹಳ ಶೋಚನೀಯ ಮತ್ತು ಖಂಡನೀಯ,

ಸರ್ಕಾರದ ಅಂಕಿ ಅಂಶಗಳ ಪ್ರಕಾರ ಇದುವರೆಗೂ ಕಾಂಗ್ರೆಸ್ಜೆ, ಬಿಜೆಪಿ, ಜೆಡಿಎಸ್ ಪಕ್ಷಗಳ ಸರ್ಕಾರಗಳು ಸುಮಾರು 70,000 ಕೋಟಿ ರೂ.ದುರ್ಬಳಕೆ ಮಾಡಿಕೊಂಡಿರುವುದು ಜನಾಂಗಕ್ಕೆ ಮಾಡಿದ ಮಹಾನ್ ದ್ರೋಹವಾಗಿದೆ,

ಕರ್ನಾಟಕ ರಾಜ್ಯದ ಪರಿಷ್ಟ ಜಾತಿ ಮತ್ತು ಪರಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಎಸ್ಸಿ.ಎಸ್‌ಪಿ ಮತ್ತು ಟಿ.ಎಸ್.ಪಿ ಯೋಜನೆ ಅಡಿ ಮೀಸಲಿಟ್ಟಿರೋ ಕೋಟ್ಯಾಂತರ ರೂಪಾಯಿ ಹಣವನ್ನು ಆ ಸಮಾಜ ಗಳಿಗೆ ಬಳಸದೆ ದುರ್ಬಳಕೆ ಮಾಡಿಕೊಂಡಿರುವುದರ ಬಗ್ಗೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ನಿರ್ದಿಷ್ಟ ಯೋಜನೆಗಳಿಗೆ ಮಾತ್ರ ಬಳಸುವಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ನಾಗಯ್ಯ,ಉಪಾಧ್ಯಕ್ಷ ಬ್ಯಾಡ್ ಮುಡ್ಲು ಬಸವಣ್ಣ, ಜಿಲ್ಲಾ ಸಂಯೋಜಕ ರಾಜಶೇಖರ್, ತಾಲೂಕು ಸಂಯೋಜಕರು ಶಾಂತರಾಜು ಕೆಸ್ತೂರು, ಉಪಾಧ್ಯಕ್ಷ ಇಸ್ಮಾಯಿಲ್,ನಾಗೇಂದ್ರ ಆಗರ, ಮಲ್ಲಿಕ್ ಹೊನ್ನೂರು,ಕುಮಾರಸ್ವಾಮಿ,ಭೀಮ ನಗರ ಮಣಿ,ಶಿವು,ಪ್ರಸಾದ್, ಮೋಹನ್,ಪವನ್,ಬಿ.ಎಸ್.ಪಿ, ಯ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಯುವಕರು ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!