Ad imageAd image

ಭಾಲ್ಕಿ.ಬಿಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ.ಪೆಟ್ರೋಲ್,ಡಿಸೇಲ್ ದರ ಹೆಚ್ಚಳ ಖಂಡಿಸಿ , ಬೃಹತ್ ಪ್ರತಿಭಟನೆ

Bharath Vaibhav
ಭಾಲ್ಕಿ.ಬಿಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ.ಪೆಟ್ರೋಲ್,ಡಿಸೇಲ್ ದರ ಹೆಚ್ಚಳ ಖಂಡಿಸಿ , ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now

ಭಾಲ್ಕಿ :- ಭಾರತೀಯ ಜನತಾ ಪಾರ್ಟಿ ಭಾಲ್ಕಿ ಮಂಡಲದ ವತಿಯಿಂದ, ಬ್ರಷ್ಠ ಕಾಂಗ್ರೆಸ್ ಸರಕಾರದ ವಿರುದ್ಧ ಇಂದು ಪಟ್ಟಣದ ಡಾ!! ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದದಲ್ಲಿ ರಸ್ತಾ ರೋಕೋ ಬೃಹತ್ ಪ್ರತಿಭಟನೆ ಆಂದೋಲನ ಹಮ್ಮಿಕೊಳ್ಳಲಾಯಿತು.ಈ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಸೇರಿ ರಿಕ್ಷಾವಾಲಾ ಆಚ್ಚಾ ಹೇ ಕಾಂಗ್ರೆಸ್ ಪಾರ್ಟಿ ಲುಚ್ಚಾ ಹೇ ಎನ್ನುವ ಘೋಷನೆಗಳನ್ನು ಕೂಗಿದರು.

ಕ್ಷೇತ್ರದ ನಾಯಕರು ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ ಕಾಂಗ್ರೆಸ್ ಪಕ್ಷವು ಬಡಜನರ ಗಾಯದ ಮೇಲೆ ಬರೇ ಎಳೆಯುವ ಕೆಲಸ ಮಾಡುತ್ತಿದ್ದೆ ರಾಜ್ಯದಲ್ಲಿ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ರಾಜ್ಯದ ಜನತೆಮೇಲೆ ಅನ್ಯಾಯ ಮಾಡುತ್ತಿದೆ ಇವತ್ತು ಪೆಟ್ರೋಲ್ ಡಿಸೇಲ್ ದರ ಹೆಚ್ಚಳ ವಾದಲ್ಲಿ ಪ್ರತಿಯೊಂದು ದಿನಬಳಕೆ ವಸ್ತುಗಳು ಇನ್ನಷ್ಟು ದುಬಾರಿ ಆಗಲಿವೆ ಎಂದು ಅಕ್ರೋಶ್ ವ್ಯಕ್ತ ಪಡಿಸಿದರು.

ಮಂಡಲ ಅಧ್ಯಕ್ಷರಾದ ವೀರಣ್ಣ ಕಾರಬಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮತನಾಡಿದರು,ಜೆಡಿಎಸ್ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ್ ನೆಳಗೆ, ಮುಖಂಡರಾದ ಶಿವರಾಜ ಗಂದಗೆ, ಸುರೇಶ್ ಬಿರಾದಾರ್, ವೆಂಕಟ್ ಬಿರಾದಾರ್, ಸಿದ್ರಾಮ ವoಕೆ, ರಾಜಕುಮಾರ್ ಭಟಾರೆ, ಮಾತನ್ನಾಡಿದರು,

ಪ್ರಮುಖರಾದ ದಿಗಂಬರ ರಾವ್ ಮಾನ್ಕಾರಿ, ಪಂಡಿತ್ ಶಿರೋಳೆ, ಅನಾರಾಜ್ ಕುಂದೆ, ಪ್ರವೀಣ್ ಸಾವರೆ, ಗೋವಿಂದರಾವ್ ಬಿರಾದರ್, ಉತ್ತಮ್ ಪುರಿ, ಸಂಜೀವ್ ಸಿಂಧೆ, ಸುರುತ್ ಸಿಂಗ್ ರಾಜಪೂತ್, ಬಾಬುರಾವ್ ಧೂಪೇ, ಸುಭಾಶ್ ಬಿರಾದಾರ್ , ಸಚಿನ್ ಜಾಧವ್, ಪಾಂಡುರಂಗ ಮೇತ್ರೆ, ಕಲ್ಯಾಣರಾವ ಚಾಟೆ, ಶಿವಾದಾಸ್ ಸಿಂಧೆ, ಗೋವಿಂದ್ ಪಾಟೀಲ್, ಜಗದೀಶ್ ಕನ್ನಾಳೆ, ಏಕನಾಥ ಮೇತ್ರೆ, ಶಿಕ್ರೇಷ್ ಬಿಲ್ಗುಂದೆ, ಸಂಗಮೇಶ ಟೆಂಕಾಳೆ, ಕೈಲಾಸ್ ಪಾಟೀಲ್ , ಸಂತೋಷ್ ಪಾಟೀಲ್, ತಾನಾಜಿ ಗಾಜರೆ, ದೀಪಕ್ ಸಿಂಧೆ, ಇನ್ನು ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:-ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!