ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ; ಆರೋಪ
ಭಾಲ್ಕಿ: ಪಟ್ಟಣದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ, ವಕ್ಫ್ ಅಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಗೆ ಸಲ್ಲಿಸಿದರು.
ನಂತರ ಮಾತನಾಡಿದ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಭಾಲ್ಕಿ ತಾಲ್ಲೂಕಿನಲ್ಲಿ ಸುಮಾರು 800 ವರ್ಷದ ಇತಿಹಾಸ ಉಳ್ಳ ರಾಮೇಶ್ವರ ಟೇಕಣಿ ಜಮೀನನ್ನು ಕೂಡಾ ತನ್ನದೆಂದು ವಕ್ಫ್ ಬೋರ್ಡ್ ನೋಟಿಸ್ ನೀಡಿದೆ ಎಂದು ದೂರಿದರು.
ಭಾಲ್ಕಿ ನಗರದ ರೈತರ ಸುಮಾರು 526 ಎಕರೆ ಜಮೀನು ಹಾಗೂ ತಾಲ್ಲೂಕಿನ
ಧನ್ನೂರ (ಎಚ್), ಲಾಧಾ, ಲಖನಗಾಂವ, ತೆಲಗಾಂವ, ಕೋನಮೇಳಕುಂದಾ, ಕೇಸರಜವಳಗಾ, ನಿಟ್ಟೂರ (ಬಿ), ಮೇಹಕರ, ಗೋಧಿಹಿಪ್ಪರ್ಗಾ, ಗೋರಚಿಂಚೋಳಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 968 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಿಸಲಾಗಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಮುಸ್ಲಿಂ ಓಲೈಕೆ, ಹಿಂದೂ ವಿರೋಧಿ ನಿರ್ಧಾರಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ ಪ್ರಮುಖರಾದ ಶಿವರಾಜ ಗಾಂಧಿಗೆ, ಗೋವಿಂದರಾವ್ ಬಿರಾದಾರ, ಕಿರಣ ಖಂಡ್ರೆ, ಚೆನ್ನಬಸವಣ್ಣ ಬಳತೆ, ಶೀವು ಲೋಖಂಡೆ, ರಾಜಕುಮಾರ ದಾಡಗಿ, ಶಿವಕುಮಾರ ಸಜ್ಜನ್, ಬಿಜೆಪಿ ಮಹಿಳಾ ಕಾರ್ಯದರ್ಶಿ ರೇಷ್ಮಾ ತಮಾಸಂಗೆ, ಲುoಬಿನಿ ಮೇಡಂ,
ಮನ್ಮಥ ಸ್ವಾಮಿ, ಡಾ. ಜಗದೀಶ ಭೂರೆ, ಪಾಂಡುರಂಗ ಕನಸೆ, ಶರದ್ ದುರ್ಗಳೆ, ಕಿಶನರಾವ್ ಪಾಟೀಲ ಇಂಚೂರಕರ್, ಕೆ.ಡಿ.ಗಣೇಶ, ಬಾಬುರಾವ್ ಧೂಪೆ, ವೆಂಕಟರಾವ್, ಡಿಗಂಬರರಾವ್ ಮಾನಕಾರಿ ಸೇರಿದಂತೆ ಇತರ ಮುಖಂಡರು ರೈತರು ಇದ್ದರು.
ವರದಿ:ಸಂತೋಷ ಬಿಜಿ ಪಾಟೀಲ