Ad imageAd image

ಸಿಟಿ ರವಿ ಬಂಧನ ಖಂಡಿಸಿ ರಾಯಚೂರು ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನ

Bharath Vaibhav
ಸಿಟಿ ರವಿ ಬಂಧನ ಖಂಡಿಸಿ ರಾಯಚೂರು ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನ
WhatsApp Group Join Now
Telegram Group Join Now

ರಾಯಚೂರು:ವಿಧಾನ ಪರಿಷತ್ ಸದಸ್ಯ ಸಿಟಿ ರವಿಯವರನ್ನು ಬಂಧಿಸಿರುವುದನ್ನು ಖಂಡಿಸಿ ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸರ್ಕಾರ ತುಳಿದು ಆಳುವ ನೀತಿಯನ್ನು ಖಂಡಿಸಿ ಘೋಷಣೆ ಕೂಗುತ್ತಾ ಸಿಟಿ ರವಿ ಅವರ ಪ್ರಕರಣವನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ನಗರ ಶಾಸಕ ಡಾಕ್ಟರ್ ಶಿವರಾಜ್ ಪಟೀಲ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ನಿನ್ನ ವಿಧಾನ ಪರಿಷತ್ ನಲ್ಲಿ ನಡೆದ ಘಟನೆಯಲ್ಲಿ ಯಾವುದೇಅಹಿತಕರ ಪದಬಳಕೆ ಕುರಿತು ಸಭಾಪತಿಗಳು ಯಾವುದೇ ರೀತಿಯ ಆಧಾರಗಳು ವಿಡಿಯೋ ಆಡಿಯೋದಲ್ಲಿ ಕಂಡುಬಂದಿಲ್ಲ ಎಂದು ತಮ್ಮ ನಿರ್ಧಾರದಲ್ಲಿ ತಿಳಿಸಿದ ನಂತರವೂ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ಪೊಲೀಸರು ವಿಧಾನ ಪರಿಷತ್ತು ಸದಸ್ಯರೆಂದು ಪರಿಗಣಿಸದೆ ಏಕ ಎಕಿ ಬಂದಿಸಿರುವುದು ಭಾರತೀಯ ಜನತಾ ಪಕ್ಷ ಖಂಡಿಸುತ್ತದೆ. ಈ ಪ್ರಕರಣದ ರಾಜ್ಜ್ಯ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಅಗ್ರಹಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ನಗರದ ಶಾಸಕರು ಡಾ. ಶಿವರಾಜ್ ಪಾಟೀಲ್ .ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಶಂಕರ್ ರೆಡ್ಡಿ. ರವೀಂದ್ರ ಜೆಲ್ದಾರ್. ರಾಜಕುಮಾರ.ಕಡುಗೊಲ್ ಆಂಜನೇಯ.ವೈ ಗೋಪಾಲ್ ರೆಡ್ಡಿ. ಶಶಿರಾಜ್. ಮಂಚಲ್ ಭೀಮಯ್ಯ. ಬಾಬುರಾವ್. ಉಪಸ್ಥಿತರಿದ್ದರು

ವರದಿ:ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!