ಕಾಳಗಿ :ತಾಲೂಕಿನ ಚಿಂತಕುಂಟಾ ಗ್ರಾಮದಲ್ಲಿ ಮೂಲಸೌಕರ್ಯಗಳ ಒದಗಿಸುವಂತೆ ಆಗ್ರಹಿಸಿ ಮುಖ್ಯ ರಸ್ತೆ ತಡೆದು ಪ್ರತಿಭಟಿಸಲಾಯಿತು.
ಈ ಗ್ರಾಮದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿದ್ದು, ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಸರಿಯಾದ ವಿದ್ಯುತ್ ಸಂಪರ್ಕದ ವ್ಯವಸ್ಥೆ ಇರುವುದಿಲ್ಲ, ಇಡೀ ಊರಿಗೆ ಒಂದೇ ಒಂದು ಕೊಳವೆ ಬಾವಿ ಇದ್ದು, ಅದರಲ್ಲೂ ಕುಡಿಯಲು ಯೋಗ್ಯವಲ್ಲದ ಗಲೀಜ ನೀರು ಬರುತ್ತಿದೆ ಎಂದು ಹಲವು ಬಾರಿ ಹಲಚೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರು.
ಸರಿಯಾದ ಸ್ಪಂದನೆ ನೀಡಿಲ್ಲ, ಹಾಗೂ ಜೆ ಜೆ ಎಮ್ ಯೋಜನೆ ಕಾಮಗಾರಿ, ಮತ್ತು ಸಿ ಸಿ ರಸ್ತೆ, ಮತ್ತು ಉದ್ಯೋಗ ಖಾತ್ರಿಯ ಯೋಜನೆ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತ ಜನರು ಪ್ರತಿಭಟನೆ ವೇಳೆ ಯಲ್ಲಿ ಅಭಿವೃದ್ಧಿ ಅಧಿಕಾರಿ ಮೇಲೆ ತೀವ್ರ ಆಕ್ರೋಶ ಗೊಂಡಿದ್ದರು, ಪ್ರತಿಭಟನೆ ಕುರಿತು ಮಾರುತಿ ಗಂಜಗಿರಿ ಮಾತನಾಡಿ, ಮೂಲಭೂತ ಸೌಕರ್ಯ ದಿಂದ ವಂಚಿತಗೊಂಡ ಈ ಗ್ರಾಮಕ್ಕೆ, ನೀರಿನ ಕೊರತೆ ಅತೀ ಹೆಚ್ಚು ಇರುವುದರಿಂದ, ಜನರಿಗೆ ಮತ್ತು ದನ ಕರುಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಆದಷ್ಟು ಬೇಗಾ ಎಲ್ಲಾ ಮೂಲ ಸೌಕರ್ಯಗಳು ಒದಗಿಸಬೇಕು ಎಂದು ಅಗ್ರಹಿಸಿ ತಾಲೂಕ ದಂಡಧಿಕಾರಿಗಳಿಗೆ ಮನವಿ ಪತ್ರ ನೀಡಿದರು, ಈ ಸಂದರ್ಭದಲ್ಲಿ : ಊರಿನ ಹಿರಿಯ ಮುಖಂಡರು, ಶಿವಶರಣಪ್ಪ ಜಾಪಟ್ಟಿ ವಕೀಲರು, ಯುವ ಹೋರಾಟಗಾರ ಸೂರ್ಯಕಾಂತ ಶರ್ಮಾ, ಊರಿನ ಹಿರಿಯರು, ಯುವಕರು, ಮಹಿಳೆಯರು, ಪೊಲೀಸರು, ಇದ್ದರು.
ವರದಿ : ಹಣಮಂತ ಕುಡಹಳ್ಳಿ




