ಕಾಗವಾಡ: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು ಎಂದು ರೈತ ಸಂಘದ ಸಂಘಟನೆಗಳು ದಿನಾಂಕ 3 ಸೋಮವಾರರಂದು ಚೆನ್ನಮ್ಮ ವೃತ್ತದಲ್ಲಿ ಇಲ್ಲಿನ ಪಟ್ಟಣದ ಚಿಕ್ಕೋಡಿ- ಮಿರಜ್ ರಾಜ್ಯ ಹೆದ್ದಾರಿ ತಡೆದು ಸೋಮವಾರ ಪ್ರತಿಭಟಿಸಿದ ರೈತರು.
ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ರೈತರು, ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಎರಡು ತಾಸಿಗೂ ಹೆಚ್ಚು ಹೊತ್ತು ರಸ್ತೆ ತಡೆದಿದ್ದರು

ರೈತರ ಸಂಘಟನೆ ಶೀತಲ ಪಾಟೀಲ ಮಾತನಾಡಿದ ಅವರು ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹3,500 ನೀಡಬೇಕು ಎಂದು ಒತ್ತಾಯಿಸಿದ್ರು ಹಾಗೂ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದರು . ಅದನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತಾಲೂಕು ಕೇಂದ್ರದ ಮೂಲಕ ಹೋರಾಟ ಮಾಡುತ್ತಿದ್ದೇವೆ’ ಎಂದರು.
ನಮ್ಮ ಬೇಡಿಕೆಯಂತೆ ಪ್ಯಾಕ್ಟರಿ ಮಾಲಕರು ಕಬ್ಬಿಗೆ ದರ ನಿಗದಿಪಡಿಸಬೇಕು. ಬಳಿಕ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು’ ಎಂದು ಒತ್ತಾಯಿಸಿದರು.
ನಂತರ ಕಾಗವಾಡ ತಹಶೀಲ್ದಾರ ರವೀಂದ್ರ ಹಾದಿಮನಿ ಮನವಿ ಸಲ್ಲಿಸಿದರು. ಹಾಗೂ ಕಾಗವಾಡ ಪೊಲೀಸ್ ಠಾಣೆ ಪಿಎಸ್ಐ ರಾಘವೇಂದ್ರ ಕೋತ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಗ್ರೇಟ್ 2 ತಹಶೀಲ್ದಾರ್ ರೇಷ್ಮಾ ಜಗಾತಿ ಶೀತಲ್ ಪಾಟೀಲ್ ಕಾಕಾ ಪಾಟೀಲ್ ವಿನಾಯಕ ಚೌಗಲೇ ರಾಜು ಕರವ ಕಾಕಾ ಚೌಗಲೇ ಪೋಪಟ ಪಾಟೀಲ್ ಸಚಿನ್ ಕೌಟಿಗೆ ಅಶೋಕ್ ಪಾಟೀಲ್ ವಕೀಲರಾದ ರಾಹುಲ್ ಕಟಗೇರಿ ಮಹೇಶ್ ಪಾಟೀಲ್ ಅಮುಲ್ ಸಾಡೇ ಅಜಿತ್ ಕಮನೆ ಈತರು ಉಪಸ್ಥಿದ್ದರು.
ವರದಿ: ಚಂದ್ರಕಾಂತ ಕಾಂಬಳೆ




