ನ್ಯಾಯ ಮೂರ್ತಿ ಬಿ ಆರ್ ಗವಾಯಿವರ ಮೇಲೆ ಶೋ ಎಸೆದವರ ವಿರುದ್ಧ ಕ್ರಮಕ್ಕೆ ಒತ್ತಾಯ
ಕಾಗವಾಡ:ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಬಿ ಆರ್ ಗವಾಯಿ ಅವರ ಮೇಲೆ ನ್ಯಾಯಾಧೀಶರಾದ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲರಾದ ರಾಕೇಶ್ ಕಿಶೋರ್ ಮತ್ತು ಅನಿಲ್ ಮಿಶ್ರಾ ಡಾಕ್ಟರ್ ಅಂಬೇಡ್ಕರ್ ಕುರಿತು ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಗವಾಡ ತಾಲೂಕಿನ ದಲಿತ ಸಂಘಟನೆಯ ಒಕ್ಕೂಟದವರು ಉಗ್ರ ಪ್ರತಿಭಟನೆ ಕೈಗೊಂಡು ತಹಸಿಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಸೋಮವಾರ ದಿನಾಂಕ 13 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇರಿದ ದಲಿತ ಸಂಘಟನೆಯ ಮುಖಂಡರು, ಜಿಲ್ಲಾ ಸಂಚಾಲಕ ಸಂಜಯ ತಳವಳಕರ್ ನೇತೃತ್ವದಲ್ಲಿ ಮುಖ್ಯ ನ್ಯಾಯಾಧೀಶರಾದ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲರಾದ ರಾಕೇಶ್ ಕಿಶೋರ್ ಮತ್ತು ಅನಿಲ್ ಮಿಶ್ರಾ ಡಾಕ್ಟರ್ ಅಂಬೇಡ್ಕರ್ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಈ ಇಬ್ಬರು ವಕೀಲರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ವಾನುಮತದಿಂದ ವಿವಿಧ ದಲಿತ ಸಂಘಟನೆಗಳು ಆಗ್ರಹಿಸಿವೆ.
ದಲಿತ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ಕಾಗವಾಡ ತಹಸಿಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಶಿಕಾಂತ ನಡೋಣಿ, ಸುನಿಲ ವಾಗ್ಮೊರೆ, ದಯಾನಂದ ವಾಘಮೊರೆ,ಉಮೇಶ್ ಮನೋಜ ಸಚಿನ ಪೂಜಾರಿ, ವಿಜಯ ಅಸೋದೆ, ರವಿ ಕುರಣಿ, ಶೇಖರ್ ಕುರಡಿ, ಮೀರಾ ಕಾಂಬಳೆ, ವಿಶಾಲ ದೊಂಡರೆ,ಉದಯ ಕೊರಡೆ, ಮಹಾಂತೇಶ ಬಡಿಗೇರ, ರವಿ ಕಾಂಬಳೆ,ವಿನೋದ ಕಾಂಬಳೆ,ಅನೀಲ ಚೌವಾನ ,ವಿದ್ಯಾಧರ ದೊಂಡಾರೆ,ದೀಪಕ ಕಾಂಬಳೆ ಸೇರಿದಂತೆ ಸಾವಿರಾರು ದಲಿತ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಚಂದ್ರಕಾಂತ ಕಾಂಬಳೆ




