Ad imageAd image

ಸಂವಿಧಾನ ಬಗ್ಗೆ ನಟ ಪ್ರಥಮ ಹೇಳಿಕೆ ಖಂಡಿಸಿ ಗೋಕಾಕದಲ್ಲಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

Bharath Vaibhav
ಸಂವಿಧಾನ ಬಗ್ಗೆ ನಟ ಪ್ರಥಮ ಹೇಳಿಕೆ ಖಂಡಿಸಿ ಗೋಕಾಕದಲ್ಲಿ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ
WhatsApp Group Join Now
Telegram Group Join Now

ಗೋಕಾಕ : ಸಂವಿಧಾನ ಶಿಲ್ಪಿ ಡಾ. ಬಿ ಆರ್​ ಅಂಬೇಡ್ಕರ್​ ಮತ್ತು ಸಂವಿಧಾನದ ಬಗ್ಗೆ ನಟ ಪ್ರಥಮ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ವಿವಿದ ದಲಿತ ಪರ ಸಂಘಟನೆಗಳು ಗೋಕಾಕದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಭಾರಿ ಪ್ರತಿಭಟನೆ ಮಾಡಿದರು.

ಇನ್ನು ಈ ಪ್ರತಿಬಟನೆಯಲ್ಲಿ ನಟ ಪ್ರಥಮ ವಿರುದ್ದ ದಿಕ್ಕಾರ ಕೂಗಿ ಅವರ ಭಾವ ಚಿತ್ರಕ್ಕೆ ಚಪ್ಪಲಿ ಎಟು ಹಾಕಿ ರಸ್ತೆ ತಡೆದು ಪ್ರತಿಬಟನೆ ಮಾಡಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ಥವಾಗಿತ್ತು.

ಇನ್ನು ಈ ಪ್ರತಿಬಟನೆಯಲ್ಲಿ ದಲಿತ ಮುಖಂಡ ಈಶ್ವರ ಗುಡಜ ಇವರು ನಟ ಪ್ರಥಮ ವಿರುದ್ದ ಹರಿಹಾಯ್ದು ಸಂವಿಧಾನದಲ್ಲಿ ಯಾವುದೆ ಲೂಪ ಇಲ್ಲ ನಿನ್ನಲ್ಲೆ ಲೆಕ್ಕವಿಲ್ಲದಷ್ಟು ಲೋಪ ಇವೆ, ಇವತ್ತು ನೀನು ಮಾತನಾಡುತ್ತಿರುವುದೆ ಸಂವಿಧಾನದ ಮೇಲೆ ಎಂದು ಕಿಡಿ ಕಾರಿದರು.ಅದರ ಜೊತೆಯಲ್ಲಿ ನಟ ಪ್ರಥಮ ಬಿಗಬಾಸ್ ಸ್ಪರ್ದಿ ಯಾಗಿದ್ದಾಗ ಅತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಆತನ ವಿರುದ್ದ ಸಂಬಂದಪಟ್ಟು ಅಧಿಕಾರಿಗಳು ಸುಮುಟೊ ಕೇಸ್ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಅದರ ಜೊತೆಯಲ್ಲಿ ಮಹಿಳಾ ದಲಿತ ಅದ್ಯಕ್ಷ ಮಂಜುಳಾ ರಾಮಗಾನಟ್ಟಿ ಇವರು ಡಾ: ಬಾಬಾ ಸಾಹೇಬರ ಸಂವಿಧಾನವನ್ಮು ಜಗತ್ತೆ ನಂಬಿರುವಾಗ ನಟ ಪ್ರಥಮ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದನ್ನ ನೋಡಿದರೆ ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು, ಹಾಗೂ ಬಾಬಾ ಸಾಹೇಬರ ಬೂಟಿನ ದೂಳಿಗೂ ಸಮನಲ್ಲ ನಟ ಪ್ರಥಮ ಎಂದು ಕಿಡಿಕಾರಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದಂತ ಉಗ್ರ ಹೊರಾಟ ಮಾಡುವದಾಗಿ ಎಚ್ಚರಿಸಿದರು.

ನಂತರ ಬಸವೇಶ್ವರ ವೃತ್ತದಿಂದ ಆಡಳಿತ ಸೌದದವರೆಗೆ ಪಾದಯಾತ್ರೆ ಮಾಡುವ ಮೂಲಕ ಪ್ರಥಮಗೆ ದಿಕ್ಕಾರ ಕೂಗುತ್ತಾ ತೆರಳಿ ತಹಶಿಲ್ದಾರ ಮುಖಾಂತರ ಪೋಲಿಸ್ ಮಹಾನಿರ್ದೇಶಕರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಮನವಿ ಮೂಲಕ ಒತ್ತಾಯಿಸಿದರು.

ಇದೆ ಸಂದರ್ಭದಲ್ಲಿ ಮನವಿ ಸ್ವೀಕರಿಸಲು ತಡಮಾಡಿದ್ದಕ್ಕಾಗಿ ಗೋಕಾಕ ತಹಶಿಲ್ದಾರ ವಿರುದ್ದ ದಿಕ್ಕಾರ ಕೂಗಿದರು.ಇನ್ನು ಯಾವುದೆ ಅಹಿತಕರ ಘಟನೆ ನಡೆಯದಂತೆ ಪೋಲಿಸರು ಸ್ಥಳದಲ್ಲಿ ಉಪಸ್ಥಿತರಿದ್ದರು.

ಈ ಪ್ರತಿಭಟನೆಯಲ್ಲಿ ದಲಿತ ಮುಖಂಡ ಸತೀಶ ಹರಿಜನ, ಗೊವಿಂದ ಕಳ್ಳಿಮನಿ,ಸುರೇಶ ಕುಮರೇಶಿ, ರಮೇಶ ಹರಿಜನ, ಶೆಟ್ಟೆಪ್ಪಾ ಮೇಸ್ತ್ರಿ ಸೇರಿದಂತೆ ಇನ್ನೂಳಿದ ದಲಿತ ಮುಖಂಡರು ಬಾಗಿಯಾಗಿದ್ದರು.

ವರದಿ:ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!