ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಬಾಣಂತಿಯರ ಸಾವು ಪ್ರಕರಣ ಖಂಡಿಸಿ ಇಂದು ಬಿಜೆಪಿ ಜಿಲ್ಲಾ ಮಹಿಳಾ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಲಾಯಿತು.
ನಿರಂತರವಾಗಿ ನಡೆಯುತ್ತಿರುವ ಬಾಣಂತಿಯ ಸಾವು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮಹಿಳೆಯರು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಬಿಜೆಪಿ ಜಿಲ್ಲಾ ಮಹಿಳಾ ಲಲಿತ ಕಡಗೊಲ್ ಆಂಜನೇಯ. ಅನಿತಾ ಬಸವರಾಜ್.
ಪ್ರಧಾನ ಕಾರ್ಯದರ್ಶಿ ಸುಮಾ ಅಶೋಕ್ ಗಸ್ತಿ. ಹಿರಿಯ ನಾಯಕಿ ಶರಣಮ್ಮ ಕಾಮರೆಡ್ಡಿ. ರೂಪ ಶ್ರೀನಿವಾಸ್ ನಾಯಕ್. ಸುಮತಿ ಶಾಸ್ತ್ರ ಸೇರಿದಂತೆ ಹಲವು ಮಹಿಳಾ ಮುಖಂಡರು ಮಾತನಾಡಿ ಕಾಂಗ್ರೆಸ್ ರಾಜ್ಯ ಸರ್ಕಾರ ವೈಫಲ್ಯ ಖಂಡಿಸಿ ಮಾತನಾಡಿದರು.
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರಿಗೆ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಔಷಧಿ ಗಳಿಲ್ಲ ಸರಿಯಾದ ವ್ಯವಸ್ಥೆ ಇಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ಬಾಳೆಹಣ್ತಿಯರ ಸಾವು ನಿಯಂತ್ರಿಸಲು ವಿಫಲವಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷ ಲಲಿತ ಕಡಗೊಳ್ ಆಂಜನೇಯ. ಪ್ರಧಾನ ಕಾರ್ಯದರ್ಶಿ ಸುಮಾ ಅಶೋಕ್ ಗಸ್ತಿ. ಅನಿತಾ ಬಸವರಾಜ್. ಶರಣಮ್ಮ ಕಾಮಾರೆಡ್ಡಿ. ರೂಪ ಶ್ರೀನಿವಾಸ್ ನಾಯಕ್ ಸುಮತಿ ಶಾಸ್ತ್ರಿ ಸೇರಿದಂತೆ ಇನ್ನಿತರ ಮಹಿಳಾ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ