Ad imageAd image

ಹೂಡಾ. ಬಿ ಗ್ರಾಮದಲ್ಲಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ.

Bharath Vaibhav
ಹೂಡಾ. ಬಿ ಗ್ರಾಮದಲ್ಲಿ ರಸ್ತೆ ತಡೆದು ರೈತರಿಂದ ಪ್ರತಿಭಟನೆ.
WhatsApp Group Join Now
Telegram Group Join Now

ಸೇಡಂ : ತಾಲೂಕಿನ ಮಳಖೇಡ ಗ್ರಾಮದಿಂದ ಹೂಡ.ಬಿ ಹಾಗೂ ರಾಜಶ್ರೀ ಸಿಮೆಂಟ್ ಕಂಪನಿಗೆ ತೆರಳುವ ರಸ್ತೆಯಲ್ಲಿ ಬರುವ ಜಮೀನುಗಳಲ್ಲಿ ಕಂಪನಿಗೆ ತೆರಳುವ ಲಾರಿಗಳ ಧೂಳಿನಿಂದ ತೊಗರಿ ಕಡಲೆ ಕೂಸಿಬೆ, ತೊಗರಿ ಸೇರಿದಂತೆ ಹಲವರು ಬೆಳೆಗಳು ಹಾನಿಯಾಗಿದ್ದು ಪರಿಹಾರ ಒದಗಿಸುವಂತೆ ಕೃಷಿ ಇಲಾಖೆ, ಪರಿಸರ ಮಾಲಿನ್ಯ, ಹಾಗೂ ರಾಜಶ್ರೀ ಸಿಮೆಂಟ್ ಕಂಪನಿಯವರಿಗೂ ಮನವಿಪತ್ರ ಸಲ್ಲಿಸಿ ಮೂರು ತಿಂಗಳಾದರೂ ರೈತರ ಮನವಿಗೆ ಸ್ಪಂದಿಸುವಲ್ಲಿ ಸರ್ಕಾರಿ ಅಧಿಕಾರಿಗಳು ಕಂಪನಿಯವರು ವಿಫಲರಾಗಿದ್ದಾರೆ ಎಂದು ಖಂಡಿಸಿ ಎರಡು ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಧರಣಿ ಸತ್ಯಾಗ್ರಹ ನಡೆಸಿದರು.

ಸಂಬಂಧಪಟ್ಟ ಅಧಿಕಾರಿಗಳು ಬೆಳೆ ಪರಿಹಾರ ರೈತರಿಗೆ ವಿತರಿಸುವಂತಹ ಪ್ರಯತ್ನ ಮಾಡುವಂತೆ ತಹಸಿಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಿ, ಒಂದು ವಾರದ ಒಳಗೆ ಪರಿಹಾರ ಹಾಗೂ ರಸ್ತೆ ಸುಧಾರಣೆಗೆ ಮುಂದಾಗದೆ ಇದ್ದಲ್ಲಿ ಮತ್ತೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆಯಿಂದ ಹಿಂದೆ ಸರಿದರು.

ಈ ವೇಳೆಯಲ್ಲಿ ರೈತರಾದ ಬಸವರಾಜ ಪಾಟೀಲ ಮಳಖೇಡ, ಶಿವಶರಣಪ್ಪ ಪೂಜಾರಿ,ಭೀಮರಾವ್ ಪಾಟೀಲ್,ಮಾಹಿತಿ ಹಕ್ಕು ಹೋರಾಟಗಾರ ಅಶೋಕ್ ಶೀಲವಂತ, ರಾಘವೇಂದ್ರ ವಾಲಿಕಾರ, ಸೇರಿದಂತೆ ಎರಡು ಗ್ರಾಮದ ರೈತರು ಪ್ರತಿಭಟನೆಯಲ್ಲಿದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!