——————————————-ಸರಕಾರಿ ನಿಯಮಗಳನ್ನು ಗಾಳಿಗೆ ತೋರಿದ ಆರೋಪ
ಮೊಳಕಾಲ್ಮೂರು: ಅತ್ಯಂತ ಹಿಂದುಳಿದ ತಾಲೂಕು ಎಂಬ ಆಣೆಪಟ್ಟ ಕಟ್ಟಿಕೊಂಡೆ ಜೀವನ ಮಾಡುತ್ತಿರುವ ರೈತರಿಗೆ ಮತ್ತು ಅನೇಕ ಕೂಲಿ ಕಾರ್ಮಿಕರಿಗೆ ವಿಂಡ್ ಫ್ಯಾನ್ ಕಂಪನಿಗಳ ತಾಲೂಕಿನಲ್ಲಿ ಬಡ ರೈತರನ್ನು ಪವನ ವಿದ್ಯುತ್ ಸ್ಥಾವರಗಳು ಭೂಮಿಯನ್ನು ಅಕ್ರಮಿಸಿಕೊಳ್ಳುತ್ತಿವೆ ಎಂದು ಸಮಾಜ ಪರಿವರ್ತನಾ ವೇದಿಕೆಯ ಅಧ್ಯಕ್ಷರಾದ,ಎಸ್ ಪರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಪರಿವರ್ತನಾ ವೇದಿಕೆ ಕರ್ನಾಟಕ ಪ್ರಾಂತ್ಯ ರೈತ ಸಂಘ ಮತ್ತು ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಇವರ ಸಹಯೋಗದಲ್ಲಿ ತಾಲೂಕಿನಲ್ಲಿ ಗುರುವಾರ ತಳವಾರಳ್ಳಿ ಗ್ರಾಮದ ಪುರಬೋರನಹಳ್ಳಿ ವಿಂಡ್ ಫ್ಯಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರು ಮಾತನಾಡಿದರು ಬಯಲು ಸೀಮೆಯ ರೈತರನ್ನು ಬಡತನದ ಕಾರಣಕ್ಕಾಗಿ ಭೂಮಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದ ರೈತರಿಗೆ ಮಲ್ಟಿ ನ್ಯಾಷನಲ್ ಕಂಪನಿಯವರು ಎಕರೆಗೆ ಲಕ್ಷ ಲಕ್ಷ ಕೊಡುತ್ತೇವೆ ಎಂದು ಆಸೆ ತೋರಿಸಿ ರೈತರ ಜಮೀನಿಗೆ ವಿಂಡ್ ಪ್ಯಾನ್ ಅನ್ನು ಹಾಕುತ್ತಾರೆ, ಇದರಿಂದ ಪ್ರಕೃತಿಗೆ ಮಾರಕ ದೈತ್ಯ ಗಾತ್ರದ ಫ್ಯಾನ್ ರೆಕ್ಕೆಗಳು ಇಲ್ಲಿನ ಪರಿಸರವನ್ನು ಹಾಳು ಮಾಡುತ್ತವೆ ಇದರ ಶಬ್ದಕ್ಕೆ ಹಳ್ಳಿಗಳಲ್ಲಿ ನಿದ್ದೆ ಮಾಡಲು ಆಗುವುದಿಲ್ಲ ಅದೇ ರೀತಿ ಕಾಡು ಪ್ರಾಣಿಗಳು ಹೆದರಿ ಓಡುತ್ತವೆ.
ನ್ಯಾಷನಲ್ ಕಂಪನಿ ಗಳು ರಾಜಕಾರಣಿಗಳೊಂದಿಗೆ ಶಾಮಿಲಾಗಿ ಎಕರೆಗೆ 10 ಪಟ್ಟು ಹಣ ನೀಡುವ ಆಮಿಷವಡ್ಡಿ ಗ್ರಾಮೀಣ ಭಾಗದ ರೈತರು ತುಂಡುಭೂಮಿಗಳನ್ನು ಕಬಳಿಸುತ್ತಿವೆ ಎಂದು ಆಕ್ರೋಶ ಹೊರ ಹಾಕಿದರು.
ಅದೇ ರೀತಿ ಮೇಲೆ ಅಧಿಕಾರಿಗಳು ಅನುಮತಿ ಪಡೆಯದೆ ಹಣಕ್ಕೆ ಮಾರಿ ಹೋಗಿ ಬೇಕಾಬಿಟ್ಟಿ ಕಡತಗಳನ್ನು ತಯಾರಿ ಮಾಡಿ ಅವಶ್ಯಕತೆ ದಾಖಲೆಗಳನ್ನು ಪರಿಚಲನೆ ಮಾಡದೆ ರೈತ ವರ್ಗದವರನ್ನು ಅನ್ಯಾಯ ಮಾಡುತ್ತಿದ್ದಾರೆ ತಳವಾರಳ್ಳಿ ಗ್ರಾಮದಲ್ಲಿ ಒಂದು ವಿಂಡ ಫ್ಯಾನಿಗೆ ಅನುಮತಿ ನೀಡಿದೆ ಮೂರು ವಿದ್ಯುತ್ ಫ್ಯಾನುಗಳನ್ನು ಹಾಕುತ್ತಿದ್ದಾರೆ.
ಈ ಕೂಡಲೇ ಇದನ್ನು ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಿ ಚಿತ್ರದುರ್ಗ ಜಿಲ್ಲೆಯ ಡಿಸಿ ಕಚೇರಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಮಧ್ಯವರ್ತಿಗಳು ಸೋಲಾರ್ ಮತ್ತು ವಿಂಡ್ ಫ್ಯಾನ್ ಕಂಪನಿಗಳಿಗೆ ಆಧಾರವಾಗಿದ್ದು. ಮಧ್ಯವರ್ತಿಗಳು ರೈತರಿಗೆ ಹಣದ ಆಮಿಷವಡ್ಡಿ ಭೂಮಿಯನ್ನು ಪರ ಬಾರೆ ಮಾಡಿಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ, ಅದೇ ರೀತಿ ಕಂಪನಿಗಳು ರೈತರಿಗೆ ನೀಡುವ ಹಣದಲ್ಲಿ ತಮಗೆ ದುಪ್ಪಟ್ಟು ಕಮಿಷನ್ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಭೂಮಿಯನ್ನೇ ನಂಬಿಕೊಂಡು ಜೀವನ ಸಾಗಿಸುವ ರೈತರಿಗೆ ತಮ್ಮ ಜಮೀನು ಕಳೆದುಕೊಳ್ಳುವ ಅಂತಕ್ಕೆ ಬಂದು ನಿಂತಿರುವುದು ವಿಪರ್ವಾಸವೇ ಸರಿ.
ಈ ಸಂದರ್ಭದಲ್ಲಿ ಮುಖಂಡರಾದ ಹಿರೇಕೆರೆಹಳ್ಳಿ ಲಕ್ಷ್ಮಣ್, ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಸಿದ್ದೇಶ್ ತಳವಾರಳ್ಳಿ ರಾಮಾಂಜನೇಯ ತಾಲೂಕು ಅಧ್ಯಕ್ಷರು, ಸಮಾಜ ಪರಿವರ್ತನಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ನಾಗಸಮುದ್ರ ಮರಿಸ್ವಾಮಿ, ಪರಮೇಶಿ, ಶಿವಣ್ಣ, ತಿಮ್ಮಲಾಪುರ, ತಿಪ್ಪೇಸ್ವಾಮಿ, ಕೆ ಬಿ ನಾಗರಾಜ್, ಕಾಮಯ್ಯ ಬಿಜಿಕೆರೆ, ಮೂರ್ತಿ, ಬಸವರಾಜ್ ತಾಲೂಕು ಪರಿವರ್ತನ ವೇದಿಕೆ ಅಧ್ಯಕ್ಷರು, ಊರಿನ ಗ್ರಾಮಸ್ಥರು ಮಹಿಳೆಯರು ಇನ್ನೂ ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ




