ಸೇಡಂ:- ತಾಲೂಕಿನ ರಂಜೋಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲ ಎಂದು ಇಂದು ಸೇಡಂ ಬಸ್ ಘಟಕದ ಎದುರುಗಡೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದರು.
ಚಿಟಕನಪಲ್ಲಿ, ಜಾಕನಪಲ್ಲಿ, ಇಮಾಡಪುರ, ಸಿಂದನಮಾಡು, ಹಣಮನಹಳ್ಳಿ, ಮಾಧವಾರ, ಹಳ್ಳಿಗಳಿಂದ ರಂಜೋಳ ಶಾಲೆಗೆ ಬರಲು ತುಂಬಾ ತೊಂದರೆಯಾಗುತ್ತದೆ. ಶಾಲೆ ಮಕ್ಕಳು ಶಿಕ್ಷಕರು ತಮ್ಮಮನೆಗಳಿಗೆ ಸೇರಲು ಸಾಯಂಕಾಲ 7 ರಿಂದ 8 ಗಂಟೆಯಾಗುತ್ತದೇ ಅದ ಕಾರಣ ರಂಜೋಳ ಗ್ರಾಮಕ್ಕೆ ಬಸ್ ಇದೆ ಸ್ವಲ್ಪ ಸಮಯ ಬದಲಾವಣೆ ಮಾಡಲು ನಿರಂತರ ಗ್ರಾಮಪಂಚಾಯಿತಿ ವತಿಯಿಂದ ಸಾಕಷ್ಟು ಬಾರಿ ಮನವಿ ಮಾಡಿದರು ಘಟಕ ವ್ಯವಸ್ಥಾಪಕರು ಸ್ಪಂದಿಸದ ಕಾರಣ ಇಂದು ಹೋರಾಟ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ತದನಂತರ ಸೇಡಂ ಬಸ್ ಘಟಕ ವ್ಯವಸ್ಥಾಪಕರಾದ ಬಿ ವೈ ವಾಟ್ಕರ್ ಅವರು ಬಂದು ಮನವಿ ಸ್ವೀಕರಿಸಿ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವೆ ಎಂದು ಭರವಸೆ ನೀಡಿದ ನಂತರ ಹೋರಾಟವನ್ನು ನಿಲ್ಲಿಸಿದರು.ಇದೇ ಸಂದರ್ಭದಲ್ಲಿ ಎರಡು ಮೂರು ದಿನಗಳ ಒಳಗೆ ಈ ಸಮಸ್ಯೆಯನ್ನು ಬಗೆಹರಿಸದಿದ್ದಾರೆ ಕನ್ನಡ ಸೈನಿಕರ ವತಿಯಿಂದ ಉಗ್ರಾ ಹೋರಾಟ ಮಾಡಲಾಗುತ್ತದೆ ಎಂದು ಗುತ್ತೇದಾರ್ ಎಚ್ಚರಿಕೆಯ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್, ಚಂದ್ರಶೇಖರ್ ಪೂಜಾರಿ, ದೇವು ನಾಟಿಕರ್, ಗುಂಡಪ್ಪ ಪೂಜಾರಿ, ರವಿಸಿಂಗ್ ಠಾಕೂರ್, ಭೀಮಾಶಂಕರ ನಾಟಿಕರ್, ಚಂದ್ರಶೇಖರ್ ಮಡಿವಾಳ, ಭಗವಂತು, ಆನಂದ್, ಅಮೃತಯ್ಯ, ಶ್ರೀನಿವಾಸ್ ರೆಡ್ಡಿ, ಮಹೇಶ್, ಶರಣಪ್ಪ, ಜಯಪ್ಪ, ಭರತ್, ಶ್ರೀಕಾಂತ್, ಅಭಿ, ಮಹೇಶ್ ನಾಟಿಕರ್, ದಿನೇಶ್, ಲಚಮಪ್ಪ, ಮಹೇಶ್, ಅನಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.