Ad imageAd image

ಕರ್ನಾಟಕ ರಾಜ್ಯ ರೈತ ಸಂಘ ,ಪ್ರಾಂತ ರೈತ ಸಂಘದಿಂದ ಪ್ರತಿಭಟನೆ.

Bharath Vaibhav
ಕರ್ನಾಟಕ ರಾಜ್ಯ ರೈತ ಸಂಘ ,ಪ್ರಾಂತ ರೈತ ಸಂಘದಿಂದ ಪ್ರತಿಭಟನೆ.
WhatsApp Group Join Now
Telegram Group Join Now

ಮೊಳಕಾಲ್ಮೂರು: ಬೆಂಗಳೂರಿನಲ್ಲಿ ನಡೆದ ರೇಣುಕಾ ಸ್ವಾಮಿ ಕೊಲೆ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರುವುದರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವ ಪಾಪಿಗಳಿಗೆ ಶಿಕ್ಷೆ ಆಗಬೇಕು ಈ ಘಟನೆ ಯಿಂದ 18 ಕುಟುಂಬಗಳು ಬೀದಿಪಾಲಾಗಿವೆ ತನ್ನದಲ್ಲದ ಸಮಸ್ಯೆಯನ್ನು ಮೈ ಮೇಲೆ ಹಾಕಿಕೊಂಡು ತನ್ನ ಸುಖ ಸಂಸಾರವನ್ನೇ ಬೀದಿಗೆ ತಳ್ಳಿದ್ದಾರೆ ಇಂತಹ ವಿಷಯಗಳಲ್ಲಿ ಮೊಬೈಲ್ ಬಳಕೆದಾರರೇ ಈ ಘಟನೆಗೆ ಎಚ್ಚರಿಕೆ ಗಂಟೆಯಾಗಿದೆ.ರೇಣುಕಾ ಸ್ವಾಮಿ ಕುಟುಂಬಕ್ಕೆ ಪರಿಹಾರವನ್ನು ಕೊಲೆಗಾರರಿಂದ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅದರಿಂದ ರೇಣುಕಾ ಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಅದೇ ರೀತಿ ರಾಜ್ಯ ಸರ್ಕಾರ ರಾಜಕಾರಣಿಗಳ ಅಧಿಕಾರಿಗಳ ಭಾಗ್ಯಗಳ ದುಂಡು ವೆಚ್ಚ ಹಣ ಸರಿದೂಗಿಸಲು ಏಕಾಏಕಿ ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಮಾಡಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ತನ್ನಷ್ಟಕ್ಕೆ ತಾನೇ ಆಗುತ್ತದೆ ಇದರಿಂದ ಸಾಮಾನ್ಯ ಜನಗಳು ಹೈರಾಣರಾಗುತ್ತಾರೆ ಇದನ್ನು ಹಿಂಪಡೆಯಲೇಬೇಕು ಎಂದು ವಾಗ್ದಾಳಿ ನಡೆಸಿದರು.

ಆಂಧ್ರಪ್ರದೇಶದಲ್ಲಿ ಬಿಟ್ಟ ಭಾಗ್ಯಗಳನ್ನು ನೀಡಿ ಸರ್ಕಾರ ಖಜನೆ ಖಾಲಿಯಾಗಿದ್ದಕ್ಕೆ ಜಗನ್ಮೋಹನ್ ರೆಡ್ಡಿಯನ್ನು ಮನೆಗೆ ಕಳಿಸಿದ್ದಾರೆ. ಇಂತಹ ಪರಿಸ್ಥಿತಿ ಕೂಡ ರಾಜ್ಯದಲ್ಲಿ ಮುಂದೆ ಆಗಬಹುದು ಇದರಿಂದ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಚಂದ್ರಣ್ಣ ನಾಗರಾಜ, ಕನಕ ಶಿವಮೂರ್ತಿ, ಕೃಷ್ಣಮೂರ್ತಿ ಮಂಜಣ್ಣ, ದಾನಶೂರ ನಾಯಕ ,ಜಯಣ್ಣ ,ಪಾಪಯ್ಯ, ನಾಗರಾಜ ಕಾಮಯ್ಯ ಮಂಜುನಾಥ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!