ಗ್ರಾಮ ಪಂಚಾಯಿತಿ ಕಛೇರಿಗೆ ಕುರಿಗಳ ಮೂಲಕ ಮುತ್ತಿಗೆ
ರಾಯಬಾಗ : ವೀಕ್ಷಕರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮದಲ್ಲಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಗ್ರಾಮ ಪಂಚಾಯಿತಿ ಕಚೇರಿಗೆ ಕುರಿಗಳನ್ನು ಕರೆದುಕೊಂಡು ಹೋಗುವ ಮೂಲಕ ಮುತ್ತಿಗೆ ಹಾಕಲಾಯಿತು.
ಕಾರಣವೆಂದರೆ ಸರ್ವೇ ನಂಬರ್ 1.14.79ರಲ್ಲಿ ಹಲವಾರು ಕುಟುಂಬಗಳು ವಾಸವಾಗಿವೆ,ಸುಮಾರು 40 ರಿಂದ 50 ವರ್ಷಗಳ ಕಾಲ ಇಲ್ಲೇ ನೆಲೆಸಿದ್ದರು ಕೂಡ,ತಾವು ಕಟ್ಟಿಕೊಂಡ ಮನೆಗಳು ಇಂದಿಗೂ ಕೂಡ ಅವರ ಹೆಸರಿನಲ್ಲಿಲ್ಲ.ಅಂದರೆ ಕೇವಲ ಗ್ರಾಮ ಪಂಚಾಯಿತಿಯ ದಪ್ತರನಲ್ಲಿ ಮಾತ್ರ ಮನೆಗಳು ನೋಂದಣಿಯಾಗಿದ್ದು ಬಿಟ್ಟರೆ, ಅಲ್ಲಿ ನೆಲೆಸಿರುವ ಹಲವಾರು ಕುಟುಂಬಗಳಿಗೆ ತಮ್ಮ ಸ್ವಂತ ಜಾಗ ಎಂಬ ಯಾವುದೇ ರೀತಿಯ ಹಕ್ಕು ಪತ್ರಗಳನ್ನು ವಿತರಣೆ ಮಾಡಿಲ್ಲ.
ಆದರೆ ಈ ಎಲ್ಲಾ ಸರ್ವೇ ನಂಬರ್ ಗಳ ಜಾಗವು ಗೈರಾನ್ ಜಾಗವಾಗಿದ್ದು, ಆದಷ್ಟು ಬೇಗ ನಮಗೆ ಹಕ್ಕುಪತ್ರಗಳನ್ನು ನೀಡಿ, ಜೀವನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಲಾಯಿತು.
ಇದೆ ರೀತಿ ಸರ್ವೆ ನಂಬರ್ 88 ರಲ್ಲಿ ಇರುವ ಸರ್ಕಾರಿ ಸ್ವಾಮೀತ್ವದ 15 ಎಕರೆ ಜಾಗವನ್ನು, ಪಿಎಂ ಕುಸುಮ ಯೋಜನೆ ಅಡಿಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಇದರಿಂದ ಗ್ರಾಮದಲ್ಲಿನ ಹಲವಾರು ಕುರಿಗಾಹಿಗಳಿಗೆ ತೊಂದರೆ ಉಂಟಾಗುತ್ತದೆ. ಏಕೆಂದರೆ ಹಲವಾರು ವರ್ಷಗಳಿಂದ ಜನರು ತಮ್ಮ ಕುರಿಗಳನ್ನು ಮೇಯಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ, ಒಂದು ವೇಳೆ ಈ ಜಾಗವನ್ನ ವಿದ್ಯುತ್ ಘಟಕ ಸ್ಥಾಪನೆಗೆ ತೆಗೆದುಕೊಂಡರೆ ಹಲವಾರು ಕುರಿಗಾಹಿ ಜನರ ಬದುಕು ಬೀದಿಗೆ ಬರುತ್ತದೆ.
ಆದ್ದರಿಂದ ದಯವಿಟ್ಟು ಸರ್ಕಾರ ನಮ್ಮ ಕಡೆ ಗಮನ ಹರಿಸಿ ಸರ್ವೇ ನಂಬರ್ ಒಂದು 1 14 79 ಈ ಸ್ಥಳಗಳಲ್ಲಿರುವ ಜನರಿಗೆ ಆದಷ್ಟು ಬೇಗ ಹಕ್ಕುಪತ್ರ ನೀಡಬೇಕು ಹಾಗೂ ಸರ್ವೆ ನಂಬರ್ 88 ರಲ್ಲಿ ನಿರ್ಮಾಣ ಮಾಡಲಿರುವ ವಿದ್ಯುತ್ ಸ್ಥಾವರ ಘಟಕವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯತಿಗೆ ಮನವಿ ನೀಡಲಾಗಿದೆ.
ವರದಿ : ಪರಶುರಾಮ ತೆಳಗಡೆ




