ಬಸವನಬಾಗೇವಾಡಿ : ತಾಲೂಕಿನ ವಡವಡಗಿ ಕ್ರಾಸ್ ಬಳಿ ನ್ಯಾಯವಾದಿ ಮೇಲೆ ಆತನ ಸಂಬಂಧಿಕರೇ ಕಳೆದ ಎರಡು ದಿನಗಳ ಹಿಂದೆ ಹಲ್ಲೆ ಮಾಡಿದ್ದಾರೆ. ಇನ್ನೂ ಹಲ್ಲೆ ಖಂಡಿಸಿ ವಿಜಯಪುರ ಬಾರ್ ಅಸೋಸಿಯೇಶನ್ ಹಾಗೂ ಬಸವನಬಾಗೇವಾಡಿ ನ್ಯಾಯವಾದಿಗಳ ಸಂಘದಿಂದ ಕೋರ್ಟ್ ಕಲಾಪದಿಂದ ದೂರ ಉಳಿದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಬಸವನಬಾಗೇವಾಡಿ ಡಿವೈಎಸ್ ಪಿ ಬಲ್ಲಪ್ಪ ನಂದಗಾಂವಿ ಹಾಗೂ ಸಿಪಿಐ ಗುರಶಾಂತ ದಾಶ್ಯಾಳ ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಸಿ ರಸ್ತೆ ತಡೆಯನ್ನ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕೋರ್ಟ್ ಆವರಣದಲ್ಲಿಯೇ ಪ್ರತಿಭಟನೆ ಮುಂದುವರೆಸಿದ ನ್ಯಾಯವಾದಿಗಳು ಹಲ್ಲೆ ಮಾಡಿದ ಆರೋಪಿಗಳನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಹಲ್ಲೆಗೊಳಗಾದ ನ್ಯಾಯವಾದಿ ಈರಣ್ಣ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಬಸವನಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




