ಹುಕ್ಕೇರಿ: ಪಟ್ಟಣದಲ್ಲಿ ಶ್ರೀ ರಾಮಗಿರಿ ಮಹಾರಾಜರು ಅವಹೇಳಕನಕಾರಿ ಪದಗಳಿಂದ ಮುಸ್ಲಿಂ ಸಮಾಜ ವತಿಯಿಂದ ಪ್ರತಿಭಟನೆ
ದಿನಾಂಕ 15/8/2024 ರಂದು ಮಹಾರಾಷ್ಟ್ರ ರಾಜ್ಯದ ಅಹ್ಮದಾಬಾದ ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಶ್ರೀ ರಾಮಗಿರಿ ಮಹಾರಾಜ ಇವರು ಇಸ್ಲಾಂ ಧರ್ಮ ಪ್ರವಾದಿ ಮೊಹ್ಮದ್ ಪೈಗಂಬರ ರವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿ ಅವಮಾನ ಮಾಡಿರುತ್ತಾರೆ.
ಮೊಹ್ಮದ್ ಪೈಗಂಬರ ಇವರ ಬಗ್ಗೆ ಅವಹೇಳನಕಾರಿ ಪದಬಳಕೆ ಮಾಡಿರುವರಿಂದ ಇಸ್ಲಾಂ ಧರ್ಮ ಅನುಯಾಯಿಗಳಾದ ನಾವು ಸಾಮೂಹಿಕವಾಗಿ ಖಂದಿಸುತ್ತೆವೆ.
ಇಸ್ಲಾಂ ಧರ್ಮದ ಮೊಹ್ಮದ್ ಪೈಗಂಬರ ಆವರ ಬಗ್ಗೆ ಸಾಕಷ್ಟು ಅವಹೇಳನಕಾರಿ ಹೇಳಿಕೆ ಮತ್ತು ಪದಬಳಕೆ ಆಗಿತ್ತಿದ್ದು ಅದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ.
ಇತ್ತೀಚ್ಚಿಗೆ ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದಲ್ಲಿ ಹಿಂದೂ ಧರ್ಮದ ಶ್ರೀ ರಾಮಗಿರಿ ಮಹಾರಾಜ ಇವರು ಅವಹೇಳನಕಾರಿ ಪದ ಬಳಕೆಯಿಂದ ಇಸ್ಲಾಂ ಧರ್ಮ ಮುಸ್ಲಿಂ ಸಮುದಾಯಕ್ಕೆ ಮಾನಸಿಕವಾಗಿ ಸಾಮಾಜಿಕವಾಗಿ ನೋವು ಉಂಟಾಗಿದ್ದು ಇದರಿಂದ ಹುಕ್ಕೇರಿ ಮುಸ್ಲಿಂ ಸಮುದಾಯದ 11 ಜಮಾತವು ಸಂಪೂರ್ಣವಾಗಿ ಖಂಡಿಸುತ್ತೆವೆ ಎಂದು 11 ಜಮಾತದ ಅಧ್ಯಕ್ಷರುಗಳು ನೇತೃತ್ವದಲ್ಲಿ ಹಾಗೂ ಊರಿನ ಹಿರಿಯರು ಮತ್ತು ಯುವ ಜನರ ಸಮೂಹದಲ್ಲಿ ಮನವಿ ಸಲ್ಲಿಸಲಾಯಿತು ಹಾಜಿ ಸೈಯದ್ ಕುತ್ಬುದ್ದಿನ್ ರಿಜವಿ ಇವರು ಮಾತನಾಡಿದರು.
ವರದಿ: ಶಿವಾಜಿ ಎನ್ ಬಾಲೆಶಗೋಳ