ಮೊಳಕಾಲ್ಮೂರು :ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಚರಂಡಿ ಕುಡಿಯುವ ನೀರು ಸ್ವಚ್ಛತೆ ಸೇರಿ ಅಗತ್ಯ ಮೂಲಸೌಕರ್ಯದ ಹೆಸರಿನಲ್ಲಿ ಹಣ ಲೂಟಿಗೆ ಮೇಲೆಧಿಕಾರಿಗಳ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು .
ನಾನಾ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು. ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿಗಾಗಿ ಅನುದಾನ ಹರಿದು ಬರುತ್ತಿದ್ದು ಅಧಿಕಾರಿಗಳು ವಾಮ ಮಾರ್ಗದಲ್ಲಿ ದುಡ್ಡು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ರಾಯಪುರ ಗ್ರಾಮ ಪಂಚಾಯಿತಿ ಯಜ್ಜನಹಳ್ಳಿ ಬೊಮ್ಮಲಿಂಗನಹಳ್ಳಿ ರಸ್ತೆ ಚರಂಡಿ ನಿರ್ಮಾಣ ಬೀದಿ ದೀಪ ನಿರ್ವಹಣೆ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರು ಲೆಕ್ಕ ತೋರಿಸಿದ್ದಾರೆ ಆದರೆ ಚರಂಡಿ ವ್ಯವಸ್ಥೆ ಆಗಿಲ್ಲ ರಸ್ತೆ ಕೊಳಚೆ ಹರಿಯುತ್ತಿದ್ದು ಇದನ್ನು ತನಿಖೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಅಧ್ಯಕ್ಷರಾದ ಮಲ್ಲಹಳ್ಳಿ ರವಿಕುಮಾರ್ ಮಾತನಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷದಿಂದ ಬಡ ರೋಗಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ವಂಚಿತರಾಗುತ್ತಿದ್ದಾರೆ, ಪಿಟಿಯಟ್ಟಿಯ ಮಾರಕ ಎನ್ನುವರು ಆಯುಷ್ಮಾನ್ ಕಾರ್ಡ್ ಸೌಲಭ್ಯ ಪಡೆಯಲು ಡಾ. ಗಿರಿಜಮ್ಮ ಅವರಿಗೆ ಹೆಬ್ಬಟ್ಟು ನೀಡಲು ಮನವಿ ಮಾಡಿದರು, ಆದರೆ ವೈದ್ಯರು ನಾನು ಹೆಬ್ಬಟ್ಟು ನೀಡುವುದಿಲ್ಲ ಯಾರಿಗಾದರೂ ದೂರು ನೀಡಬಹುದು ಎಂದು ಆರಿಕೆಯಾಗಿ ಉತ್ತರ ನೀಡುತ್ತಾರೆ, ಈ ವೈದ್ಯರು ಮಾತ್ರ ಸರ್ಕಾರ ಕೆಲಸದ ಬಿಟ್ಟು ಹೆಚ್ಚಾಗಿ ತಮ್ಮ ಮನೆಯಲ್ಲಿ ಚಿಕಿತ್ಸೆ ನೀಡುತ್ತಾರೆ ಎಂದು ಆಕ್ರೋಶ ಅವರ ಹಾಕಿದರು. ಬಡ ರೋಗಿಗಳ ನಿರ್ಲಕ್ಷೆ ತೋರುವ ಇಂತಹ ವೈದ್ಯರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ತಿಳಿಸಿದರು ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಅತಿ ಬೇಗನೆ ಭರ್ತಿ ಮಾಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಆಸ್ಪತ್ರೆಯಲ್ಲಿನ ಸಮಸ್ಯೆಗಳಾದ ಆಸ್ಪತ್ರೆ ರೋಗಿಗಳ ಕೊಠಡಿಯಲ್ಲಿ ಹವಾನಿಯಂತ್ರಣ ಯಂತ್ರಗಳಿಲ್ಲ.ಸ್ವಚ್ಛತೆ ಇಲ್ಲದೆ ರೋಗಿಗಳ ಪರದಾಟ,ವೈದ್ಯರಿಲ್ಲದೆ ಕೇವಲ ನರ್ಸ್ ಗಳಿಂದಲೇ ಚಿಕಿತ್ಸೆ.ಉಚಿತ ಆರೋಗ್ಯ ಕ್ಯಾಂಪೇನ್ಗಳ್ಳಲ್ಲಿ ಹಣ ವಸಲಿ ಮಾಡುತ್ತಾರೆ ಎಂಬ ಆರೋಪಸಣ್ಣಪುಟ್ಟ ರೋಗಗಳಿಗೂ ದೂರದ ಬಳ್ಳಾರಿಗೆ ಕಳಿಸುವುದು.ಮನಸ್ಸು ಇಚ್ಛೆ ಬಂದು ಹೋಗುವ ವೈದ್ಯರು ಆಸ್ಪತ್ರೆ ಸಿಬ್ಬಂದಿ. ಈ ಎಲ್ಲಾ ಆರೋಪಗಳಿದ್ದು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವ ರೆಡ್ಡಿ ರವಿಕುಮಾರ್ ಸೂರಮನಹಳ್ಳಿ ರಾಜಣ್ಣ ಈರಣ್ಣ ಪಾಪಯ್ಯ ರಾಮಾಂಜನಿ ಬಸವರಾಜ್ ರುದ್ರಮುನಿ ಶ್ರೀನಿವಾಸ್ ದಾಸಪ್ಪ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ:ಪಿಎಂ ಗಂಗಾಧರ




