Ad imageAd image

ಶಿಕ್ಷಕ ವರ್ಗಾವಣೆ ರದ್ದು ಪಡಿಸಲು ವಿದ್ಯಾರ್ಥಿಗಳಿಂದ ಪ್ರತಿಭಟನೆ

Bharath Vaibhav
ಶಿಕ್ಷಕ ವರ್ಗಾವಣೆ  ರದ್ದು ಪಡಿಸಲು ವಿದ್ಯಾರ್ಥಿಗಳಿಂದ ಪ್ರತಿಭಟನೆ
WhatsApp Group Join Now
Telegram Group Join Now

ಚಿಟಗುಪ್ಪ: ತಾಲ್ಲೂಕಿನ ಬಸೀರಾಪೂರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ, ನಾಗಪ್ಪ ಕರಕನ್ನಳ್ಳಿ ಅವರ ವರ್ಗಾವಣೆ ರದ್ದು ಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶನಿವಾರ ಗ್ರಾಮದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಎಂದಿನಂತೆ ಶಾಲಾ ಮೈದಾನದಲ್ಲಿ ಪ್ರಾರ್ಥನೆ ಮಾಡಿದ್ದ 1ರಿಂದ 8ನೇ ತರಗತಿಯ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿ ಕೊಠಡಿಯೊಳಗೆ ಕುಳಿತುಕೊಳ್ಳದೆ ಮತ್ತು ಶಿಕ್ಷಕರನ್ನು ಒಳಗಡೆ ಇರಲು ಬಿಡದೆ ಎಲ್ಲಾ ಶಿಕ್ಷಕರಿಗೆ ಹೊರಗಡೆ ಕಳಿಸಿ ಕೊಠಡಿಗಳಿಗೆ ಬೀಗ ಹಾಕಿದ್ದಾರೆ.

ತರಗತಿ ಬಹಿಷ್ಕರಿಸಿ ಕಾಂಪೌಂಡ್ ಹೊರಗೆ ಬಂದ ವಿದ್ಯಾರ್ಥಿಗಳು ಶಾಲಾ ಗೇಟ್‌ಗೆ ಬೀಗಹಾಕಿ ಎದರುಗಡೆ ಇರುವ ರಸ್ತೆ ಮೇಲೆ ಕುಳಿತು ಯಾವುದೇ ಕಾರಣಕ್ಕೂ ನಮ್ಮ ನೆಚ್ಚಿನ ಕನ್ನಡ ಶಿಕ್ಷಕ ನಾಗಪ್ಪ ಕರಕನ್ನಳ್ಳಿ ಅವರನ್ನು ಬೇರೆಡೆ ವರ್ಗಾವಣೆ ಮಾಡಬಾರದು.ಅವರ ವರ್ಗಾವಣೆ ಆದೇಶವನ್ನು ಈ ಕೂಡಲೇ ರದ್ದುಗೊಳಿಸಬೇಕು. ಆದೇಶ ಹಿಂಪಡೆಯುವವರೆಗೂ ನಾವು ಒಳಗೆ ತರಗತಿಯಲ್ಲಿ ಕುಳಿತುಕೊಳ್ಳುವುದಿಲ್ಲ ವಿದ್ಯಾರ್ಥಿಗಳು ತಿಳಿಸಿದರು.

ಈ ಮಧ್ಯೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಮನವೊಲಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾಗ ಪ್ರತಿಭಟನೆ ನಿಲ್ಲಿಸಿ ಎಂದಿನಂತೆ ತರಗತಿಗೆ ಹಾಜರಾದರು.

ಕನ್ನಡ ಶಿಕ್ಷಕ ನಾಗಪ್ಪ ಕರಕನ್ನಳ್ಳಿ ಅವರು 25 ವರ್ಷ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರ ನಿಯಮ ಅನುಸಾರ ಹೆಚ್ಚುವರಿ ಶಿಕ್ಷಕರಾಗಿ ಆಯ್ಕೆಯಾದ ಪ್ರಯುಕ್ತ ಸೆ.11ರಂದು ತಾಲ್ಲೂಕಿನ ಪೋಲಕಪಳ್ಳಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಕ ನಾಗಪ್ಪ ಕರಕನ್ನಳ್ಳಿ ಸರ್ಕಾರದ ನಿಯಮಾನುಸಾರ ವರ್ಗಾವಣೆ ಆಗಿದೆ.

ಆದರೆ ವಿದ್ಯಾರ್ಥಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ,ವಿಶ್ವಾಸ,ನೋಡಿದರೆ ಇಲ್ಲಿಂದ ಕಾಲ್ಕಿತ್ತಲು ಮನಸ್ಸು ಒಪ್ಪುತ್ತಿಲ್ಲ ಎಂದು ನೋವಿನಿಂದ ಹೇಳಿದರು.

ಶಿಕ್ಷಕರ ವರ್ಗಾವಣೆ ಖಂಡಿಸಿ 15ರಂದು ಗ್ರಾಮಸ್ಥರಿಂದ ಶಾಲೆಯ ಎದುರುಗಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಿನಕೇರಾ ಗ್ರಾಮ ಪಂಚಾಯತ ಶ್ರೀಕಾಂತ ಪಾಟೀಲ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!